ಗವಿಮಠಕ್ಕೆ ದೇಣಿಗೆ ನೀಡಿ ಔದಾರ್ಯ ಮೆರೆದ ಕುಂಬಾರ ಕುಟುಂಬ

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಕೊಪ್ಪಳ ಗವಿಮಠದ ಐದು ಸಾವಿರ ವಿದ್ಯಾರ್ಥಿಗಳ ವಸತಿ ಹಾಗೂ ಉಚಿತ ಪ್ರಸಾದ ನಿಲಯ ಕಟ್ಟಡ ನಿರ್ಮಾಣಕ್ಕೆ ಜಿಲ್ಲೆಯ ಕುಷ್ಟಗಿ ಪಟ್ಟಣದ ಕುಂಬಾರ ಕುಟುಂಬವೊಂದು ಮಣ್ಣೇತ್ತು ಮಾರಿದ ಹಣವನ್ನು ದೇಣಿಗೆ ನೀಡುವ ಮೂಲಕ ಔದಾರ್ಯತೆ ಮೆರೆದಿದೆ.!

ಶ್ರೀಮತಿ ಗಂಗಮ್ಮ ಗಂಡ ಶರಣಪ್ಪ ಕುಂಬಾರ ಎಂಬ ತೆಗ್ಗಿನ ಓಣಿಯ ದಂಪತಿ ಕೆಲ ದಿನಗಳ ಹಿಂದೆ ಅಮವಾಸ್ಯೆ ದಿನದಂದು ಕುಲಕಸಬು ಆಗಿರುವ ಮಣ್ಣೇತ್ತುಗಳನ್ನು ತಯಾರಿಸಿ ಮಾರಾಟ ಮಾಡಿದ್ದರು. ಅದರಿಂದ ಬಂದ ಹಣದಲ್ಲಿ 1560 ರೂಪಾಯಿಗಳನ್ನು ಕೊಪ್ಪಳದ ಗವಿಶ್ರೀಗಳಿಗೆ ದೇಣಿಗೆ ಕೊಟ್ಟು ಶ್ರೀಗಳಿಂದ ಆಶೀರ್ವಾದ ಪಡೆದು ಪುನಿತರಾಗಿದ್ದಾರೆ. ಕೊಪ್ಪಳ ಶ್ರೀಗಳು ಭಾನುವಾರ ಪಟ್ಟಣದಲ್ಲಿ ಭಕ್ತರ ಮನೆಗಳಿಗೆ ಪಾದಾರ್ಪಣೆ ಮಾಡಿದಾಗ ಚಿಕ್ಕ ಚಿಕ್ಕ ಮಕ್ಕಳು ತಮ್ಮ ಹುಟ್ಟು ಹಬ್ಬಕ್ಕೆಂದು ಕಲೆಹಾಕಿದ ಹಣದ ಉಂಡಿಯನ್ನು ಶ್ರೀಗಳಿಗೆ ಕೊಟ್ಟು ಆಶೀರ್ವಾದ ಪಡೆದದ್ದು, ಇಲ್ಲಿ ಸ್ಮರಿಸಬಹುದು..!!