ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಹತ್ತಿ (ಕ್ರಾಸ್) ಬೀಜ ವಿತರಿಸುವ ಖಾಸಗಿ ಕಂಪನಿಗಳ ಮೊಸಕ್ಕೆ ರೈತರು ಬಲಿಯಾಗುತ್ತಿದ್ದಾರೆ..!
ಕ್ವಿಂಟಲ್ ಹತ್ತಿ ಬೀಜಕ್ಕೆ 34 ಸಾವಿರ ರೂಪಾಯಿಗಳನ್ನು ನೀಡುವುದಾಗಿ ಹತ್ತಿ ಬೀಜದ ಕಂಪನಿಯವರು ಮುಗ್ದ ರೈತರ ಮುಂದೆ ಆರಂಭದಲ್ಲಿ ದೊಡ್ಡದಾಗಿ ಹೇಳುತ್ತಾರೆ. ಆದರಂತೆ ಬೀಜಗಳನ್ನು ಕೂಡಾ ವಿತರಿಸುತ್ತಾರೆ. ಸಾವಿರಾರು ರೂಪಾಯಿಗಳನ್ನು ಖರ್ಚುಗೊಳಿಸಿ, ಹದಗೊಳಿಸಿದ ಜಮೀನಿನಲ್ಲಿ ನಾಟಿಗೆ ಮುಂದಾಗುವ ರೈತರು ಸಂಪೂರ್ಣ ಫಸಲು ಬೆಳೆಯುತ್ತಾರೆ. ಇನ್ನೇನು ಫಸಲಿಗೆ ಕ್ರಾಸ್ ಆರಂಭಿಸಬೇಕೆನ್ನುವ ಸಂದರ್ಭದಲ್ಲಿ ರೈತರಿಗೆ ತಾಕೀತು ಮಾಡುವ ಮೂಲಕ ತಾವು ಅನ್ ಕ್ರಾಸ್ ಗಂಡು ಹತ್ತಿ ಬೆಳೆದಿದ್ದೀರಿ ಎನ್ನುವ ಕಂಪನಿ ಮೊಸಕ್ಕೆ ರೈತರು ಪ್ರತಿ ವರ್ಷ ಬಲಿಯಾಗುತ್ತಿದ್ದಾರೆ. ಮಿಶ್ರಣ (ಗಂಡು ಮತ್ತು ಹೆಣ್ಣು) ಬೀಜಗಳನ್ನು ನೀಡುವ ಕಂಪನಿ ತಪ್ಪಿಗೆ ರೈತರು ಲಕ್ಷಾಂತರ ರೂಪಾಯಿಗಳ ಹಾನಿ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರಿಗಾಗುವ ಮೊಸಕ್ಕೆ ಯಾರು ಹೊಣೆಗಾರರು ಎಂಬುದು ತಿಳಿಯದಂತಾಗಿದೆ..!?
(ಮುಂದುವರೆಯುವುದು…)
ನಾಳೆ..
– ಕಂಪನಿಯವರು ರೈತರೊಂದಿಗೆ ಯಾವುದೇ ತರಹದ ಒಪ್ಪಂದ ಪತ್ರಗಳನ್ನು ಮಾಡಿಕೊಂಡಿಲ್ಲ. ಇದೊಂದು ಮಾಫಿಯಾ ಅಲ್ಲವೇ..!?