ಕರಡಿ ದಾಳಿ : ರೈತನಿಗೆ ಗಾಯ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ನಾರಿನಾಳ ಗ್ರಾಮದಲ್ಲಿ ಕರಡಿ ದಾಳಿಯಿಂದ ರೈತನೊಬ್ಬ ಗಾಯಗೊಂಡಿರುವ ಟನೆ ತಡವಾಗಿ ಬೆಳಕಿಗೆ ಬಂದಿದೆ..!

ಉಪಳೆಪ್ಪ ಪೂಜಾರಿ (38) ಕರಡಿ ದಾಳಿಯಿಂದ (ಪರಚಿದ) ಗಾಯಗೊಂಡ ರೈತ. ಏಕಾ ಏಕೀ ಕರಡಿ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಉಪಳೆಪ್ಪ ಯಶಸ್ವಿಯಾಗಿದ್ದಾನೆ. ಹಗಲದಾಳ ಗ್ರಾಮದ ಸೀಮಾದಿಂದ ನಾರಿನಾಳ ಗ್ರಾಮಕ್ಕೆ ದಿನಾಂಕ 30-06-2022 ಸಾಯಂಕಾಲ ಸುಮಾರಿಗೆ ಕರಡಿ ದಾಳಿಮಾಡಿದೆ‌. ಕರಡಿ ದಾಳಿಯಿಂದ ಹಗಲದಾಳ, ನಾರಿನಾಳ, ವಿಠಲಾಪೂರು ಸೇರಿದಂತೆ ತಾವರಗೇರಾ ಪಟ್ಟಣದ ನಾಗರಿಕರು ಭಯದ ವಾತವರಣದಲ್ಲಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಕರಡಿ ಜಾಲ ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ. ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..!!