ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿರುವ ‘ಹೆಸರು’ ಬೆಳೆಗೆ ‘ಹಳದಿ’ ನಂಜು ರೋಗ ಆವರಿಸಿಕೊಳ್ಳುತ್ತಿದೆ..!
ಹೆಸರು ಬೆಳೆಗೆ ಕಾಣಿಸಿಕೊಂಡಿರುವ ಹಳದಿ ನಂಜು ರೋಗ ಬಾಧೆ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿ ಪ್ರದೇಶ ಹೆಚ್ಚಾಗತೊಡಗಿದೆ. ರೈತರು ಸಮರೋಪ ಹಾದಿಯಲ್ಲಿ ರೋಗ ನಿಯಂತ್ರಣಕ್ಕೆ ಮುಂದಾದಾಗ ಮಾತ್ರ ಬೆಳೆ ಸಂರಕ್ಷಿಸಬಹುದಾಗಿದೆ. ಅಲ್ಪ ದಿನಗಳ ಬೆಳೆಯಾಗಿರುವ ಹೆಸರು ಬೆಳೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದಲ್ಲಿ ಹಳದಿ ನಂಜಾಣು ರೋಗ ಹೆಸರು ಬೆಳೆ ನಾಶಕ್ಕೆ ಕಾರಣವಾಗುತ್ತದೆ. ಕೂಡಲೇ ಕ್ರಮಕ್ಕೆ ಮುಂದಾಗುವಂತೆ ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಪ್ರಕಟಣೆ ಮೂಲಕ ಸಂದೇಶ ನೀಡಿದೆ..!!