ರಾಜು ಬಾಳಿತೋಟ ಇವರ ಸೇವೆ ಶ್ಲಾಘನೀಯ : ಬಿಇಓ ಸುರೇಂದ್ರ ಕಾಂಬಳೆ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ರಾಜು ಬಾಳಿತೋಟ ಇವರ ಸೇವೆ ಶ್ಲಾಘನೀಯವಾಗಿದೆ ಎಂದು ಬಿಇಓ ಸುರೇಂದ್ರ ಆರ್ ಕಾಂಬಳೆ ಅಭಿಪ್ರಾಯವ್ಯಕ್ತಪಡಿಸಿದರು.

ಜಿಲ್ಲೆಯ ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮುದೇನೂರು ಪ್ರೌಢ ಶಾಲೆಗೆ ವರ್ಗಾವಣೆಯಾದ ಪ್ರಥಮ ದರ್ಜೆ ಸಹಾಯಕ ರಾಜು ಬಾಳಿತೋಟ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಬಿಳ್ಕೊಟ್ಟು ಮಾತನಾಡಿದರು.

ಪತ್ರಾಂಕಿತ ವ್ಯವಸ್ಥಾಪಕ ಶಿವಶಂಕರ, ಅಧೀಕ್ಷಕರಾದ ಸೂರ್ಯನಾರಾಯಣ ಅಕ್ಕಸಾಲಿಗ, ಚಂದ್ರಶೇಖರ ಶಿರಗುಂಪಿ, ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಧರ್ಮಕುಮಾರ ಕಂಬಳಿ, ಮುಖ್ಯಗುರು ಎಸ್.ಜಿ.ಕಡೇಮನಿ, ನಿವೃತ್ತ ಶಿಕ್ಷಕರಾದ ಅಬ್ದುಲ್ ಕರಿಂ ವಂಟೆಳಿ, ವಿ.ಎಸ್.ಕಾಡಗಿಮಠ, ಮಲ್ಲಪ್ಪ ಬಾಳಿ, ವಿ.ಆರ್.ಪಾಟೀಲ್, ಹಿರೇಮನ್ನಾಪೂರು ಬಸವರಾಜ ಹಿರೇಮಠ, ಶಿಕ್ಷಕರಾದ ಅಮರೇಶ ತಮ್ಮಣ್ಣವರ, ಇಸಿಓ ದಾವಲಸಾಬ್, ಶಿಕ್ಷಣ ಸಂಯೋಜಕ ತಿಮ್ಮಣ್ಣ ಹಿರೇಹೋಳಿ, ಸಿಬ್ಬಂದಿ ಸೈಯ್ಯದ ಮುರ್ತುಜಾ ಖಾದ್ರಿ, ಶಂಕರಪ್ಪ ಬಡಿಗೇರ, ಶಿಕ್ಷಣ ಸಂಯೋಜಕ ರಾಘಪ್ಪ ಶ್ರೀರಾಮ, ಶಾಂತವೀರಗೌಡ, ಸವಿತಾ ಕುಲಕರ್ಣಿ, ಕನಕನಗೌಡ , ಸಂತೋಷ, ಪ್ರಶಾಂತ, ಶಿವಪ್ಪ, ಮುತ್ತು (ಶಿವರುದ್ರಪ್ಪ) ಬಂಡಿ, ಸಿದ್ದಯ್ಯ ಹಿರೇಮಠ, ಎಂ.ಸಿ.ತೋಪಲಕಟ್ಟಿ, ಸೋಮಶೇಖರ ಮಳಿಮಠ ಹಾಗೂ ಕಿರಣಕುಮಾರ ರಾಠೋಡ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು..!!