ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕ್ವಿಂಟಲ್ ಹತ್ತಿ ಬೀಜ ತೂಕ ತೂಗಿದರೇ ಸಾಕು, 7 ಕೆ.ಜಿ ರೈತರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ..! ಇದು ಕಡ್ಡಾಯ ಕೂಡಾ..!!
ಕ್ರಾಸ್ ಹತ್ತಿ ಬೀಜ ಬೆಳೆಯುವ ರೈತರಿಗೆ ಮೊಸದ ಮೇಲೊಂದು ಮೊಸ ಎಂದರೇ.. ತಪ್ಪಾಗಲಾರದು. ಹೇಳಿ ಕೇಳಿ ಹತ್ತಿ ಹಗರಣದಲ್ಲಿ ವಿಭಿನ್ನ ರೀತಿಯಲ್ಲಿ ರೈತರು ಶೋಷಣೆಗೊಳಪಡುತ್ತಾರೆ. ಇಲ್ಲಿಯವರೆಗೂ ತೂಕದಲ್ಲಿ ಮೊಸ (ಮುಂಗೋಲು, ಕಂಪ್ಯೂಟರ್ ತಕ್ಕಡಿಯಲ್ಲಿ ತಂತ್ರಜ್ಞಾನದ ಮೊಸ) ಬಿದ್ದ ಕಾಳು, ಹಮಾಲಿ, ದಲಾಲಿ ಇತ್ಯಾದಿ ಮೊಸಗಳನ್ನು ಮಾತ್ರ ಕೇಳಿದ್ದೇವು. ಆದರೆ, ಪ್ರತಿ ಕ್ವಿಂಟಲ್ ಬೀಜಕ್ಕೆ 7 Kg ಯಷ್ಟು ಕತ್ತರಿ ಹಾಕುವುದು ಮಾತ್ರ ಯಾವ ನ್ಯಾಯ ಎಂದು ರೈತ ಸಮೂಹ ಖಾಸಗಿ ಕಂಪನಿಗಳನ್ನು ಪ್ರಶ್ನಿಸುತ್ತಿದ್ದಾರೆ..? ಈಗ ನೀಡುವ ಅತ್ಯಂತ ಕಡಿಮೆಯ 34 ಸಾವಿರ ರೂಪಾಯಿಗಳ ಕ್ವಿಂಟಲ್ ದರಕ್ಕೆ ಲೆಕ್ಕ ಹಾಕಿದರೇ.. ಕ್ವಿಂಟಲ್ ಗೆ 2380=00 ರೂಪಾಯಿಗಳಷ್ಟು ಹಾನಿಯನ್ನು ರೈತರು ನೇರವಾಗಿ ಅನುಭವಿಸುತ್ತಿದ್ದಾರೆ. ರೈತರಿಗಾಗುವ ಈ ಬಹಿರಂಗ ಮೊಸಕ್ಕೆ ಈ ವರ್ಷವಾದರೂ ಕಡಿವಾಣ ಬೀಳಬೇಕಾಗಿರುವುದು ಬಾಕಿ ಇದೆ. ಅಲ್ಲದೆ, ಖಾಸಗಿ ಬೀಜ ಕಂಪನಿಗಳು ಅಥವಾ ಜವಾಬ್ದಾರಿ ಹೊತ್ತು ಬೀಜ ವಿತರಿಸುವ ಮಧ್ಯವರ್ತಿಗಳು ಈ ಕುರಿತು ರೈತರಿಗೆ ಸ್ಪಷ್ಟ ಉತ್ತರ ನೀಡಲೇಬೇಕಾಗಿದೆ..!?
(ಮುಂದುವರೆಯುವುದು…)