ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ ದಿನಾಂಕ 15-07-2022 ರಂದು ಶ್ರೀ ನಂದೀಶ್ವರ ದವಾಖಾನೆ ಆಶ್ರಯದಲ್ಲಿ ರಕ್ತದಾನ ಹಾಗೂ ಜನರಲ್ ಫಿಜಿಶಿಯನ್ ಮತ್ತು ಚಿಕ್ಕಮಕ್ಕಳ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ..!
ಗಜೇಂದ್ರಗಡ ತಾಲೂಕಾ ಆಸ್ಪತ್ರೆ ವೈದ್ಯಾಧಿಕಾರಿ ಫಿಜಿಶಿಯನ್ ಡಾ.ಚಿದಾನಂದ ಮುಂಡಾಸದ ಹಾಗೂ ಚಿಕ್ಕಮಕ್ಕಳ ತಜ್ಞ ಅನಿಲ ಎಸ್ ಶೆಟ್ಟರ್ ಸೇರಿದಂತೆ ಖ್ಯಾತ ವೈದ್ಯರ ತಂಡ ಉಚಿತ ತಪಾಸಣಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದು ಡಾ.ಲಕ್ಷ್ಮೀ ಮಂಜುನಾಥ ಹಾದಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!