ಹನುಮನಾಳ ಗ್ರಾಮ ಪಂಚಾಯತಿಗೆ ಉಪಾಧ್ಯಕ್ಷರಾಗಿ ಭೀಮವ್ವ ಮಲ್ಲಪ್ಪ ತುಂಬದ ಆಯ್ಕೆ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಜೀನಾಮೆಯಿಂದ ತೆರವು ಆಗಿದ್ದ ಹನುಮನಾಳ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಥಳೀಯ ಸದಸ್ಯೆ ಭೀಮವ್ವ ಮಲ್ಲಪ್ಪ ತುಂಬದ ಆಯ್ಕೆಯಾಗಿದ್ದಾರೆ..!

ಸ್ಥಳೀಯ ಸದಸ್ಯೆ ಅಂದವ್ವ ಅಂದನಗೌಡ ಕೊಟ್ನಳ್ಳಿ ಇಲ್ಲಿಯವರೆಗೂ ಉಪಾಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಆದರೆ, ಅವರು ತಮ್ಮ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಎಂದಿನಂತೆ ನಿಗದಿಯಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ( ದಿನಾಂಕ 15-07-2022 ) ತಹಸೀಲ್ದಾರ ಗುರುರಾಜ ಅವರ ನೇತೃತ್ವದಲ್ಲಿ ಚುನಾವಣೆ ಜರುಗಿತು. ಭೀಮವ್ವ ತುಂಬದ ಒಬ್ಬರೆ ನಾಮಪತ್ರ ಸಲ್ಲಿಸಿದ್ದರ ಹಿನ್ನಲೆಯಲ್ಲಿ ಇವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ಲೆಂಕಪ್ಪ ಸಾಂತಗೇರಿ, ಪಿಡಿಓ ಪ್ರಶಾಂತ ಹಿರೇಮಠ, ಕಂದಾಯ ನೀರಿಕ್ಷಕ ಅಬ್ದುಲ್ ರಜಾಕ್, ಗ್ರಾಮ ಲೆಕ್ಕಾಧಿಕಾರಿ ಪ್ರಸನ್ನ ಕುಲಕರ್ಣಿ, ಕಾರ್ಯದರ್ಶಿ ಶಶಿರೇಖಾ ಹಿರೇಮಠ ಸೇರಿದಂತೆ ಎಲ್ಲಾ ಸದಸ್ಯರು, ಮುಖಂಡರು ಉಪಸ್ಥಿರಿದ್ದರು..!!