ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ :
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಹಿರಿಯ ಜಾನಪದ ಸಾಹಿತಿ ವಾ.ಹ.ಯಕ್ಕರನಾಳ ಇವರ ರಚಿತ 5 ನೇ ಕೃತಿ ‘ಶಾಸನ ಸಭೆಯಲ್ಲಿ ತಲೆ ಇಲ್ಲದ ಗೊಂಬೆಗಳು’ ಎಂಬ ಪುಸ್ತಕ ಇತ್ತೀಚಿಗೆ ಗದಗ ನಗರದ ಶ್ರೀ ತೋಂಟದಾರ್ಯ ಕಲ್ಯಾಣ ಮಂಟದಲ್ಲಿ ವಿಶ್ವ ಪತ್ರಿಕಾ ದಿನಾಚರಣೆಯಂದು ತೋಂಟದಾರ್ಯ ಮಠದ ಶ್ರೀ ಸಿದ್ಧರಾಮಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು..!
ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರು, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರಗೇಶ ಶಿವಪೂಜಿ, ಗದಗ ಜಿಲ್ಲಾ ಘಟಕದ ಅಧ್ಯಕ್ಷ ಅಧ್ಯಕ್ಷ ರವಿ ಭಜಂತ್ರಿ, ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಆರ್, ಶರಣಪ್ಪ ಗುಮಗೇರಿ, ಲೇಖಕ ವಾಲ್ಮೀಕಿಪ್ಪ ಯಕ್ಕರನಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..!!