ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಸರಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಮೂಲಕ ಸೇವೆ ಸಲ್ಲಿಸುವ ನೌಕರರ ಸಂಬಳದಲ್ಲಿ ಕಡಿತವಾಗುವ ‘ಜಿ.ಎಸ್.ಟಿ’ ತುಂಬಾ ಹೊರೆಯಾಗಿ ಪರಿಣಮಿಸಿದೆ..!
ತೀರಾ ಕಡಿಮೆ ಸಂಬಳದಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರಿಗೆ (ಕೇಂದ್ರ ಸರಕಾರದ ಶೇ.9 ಹಾಗೂ ರಾಜ್ಯ ಸರಕಾರದ ಶೇ.9 ) ಒಟ್ಟು ಶೇ.18 ರಷ್ಟು ಹಣ ತಿಂಗಳ ಸಂಬಳದಲ್ಲಿ ಕಡಿತವಾಗುವುದು ಇದು ಯಾವ ನ್ಯಾಯ ಎಂದು ಹೊರಗುತ್ತಿಗೆ ನೌಕರರು ಪ್ರಶ್ನಿಸುತ್ತಿದ್ದಾರೆ..?
ಸರಕಾರಿ ನೌಕರರಿಗಿಂತಲೂ ಹೆಚ್ಚು ಕೆಲಸ ತೆಗೆದುಕೊಳ್ಳುವ ಸರಕಾರ ನೀಡುವ ಅಲ್ಪ ಸಂಬಳದಲ್ಲಿ ಶೇ.18 ರಷ್ಟು ಜಿ.ಎಸ್.ಟಿ ಹೆಸರಿನಲ್ಲಿ ಸಂಬಳ ಕಡಿತಗೊಳಿಸುವುದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತಾಗಿದೆ. ಖಾಸಗಿ ಸಂಸ್ಥೆಗಳ ಮೂಲಕ ನೇಮಕಗೊಳಿಸಿಕೊಂಡು, ಸವಾರಿ ಮಾಡುವ ಸರಕಾರದ ವ್ಯವಸ್ಥೆಗೆ ಹೊರಗುತ್ತಿಗೆ ನೌಕರರು ನಿತ್ಯ ಹಿಡಿ ಶಾಪ ಹಾಕುತ್ತಿದ್ದಾರೆ.
ಸರಕಾರಿ ನೌಕರರಿಗೆ ರತ್ನ ಕಂಬಳಿ : ಒಂದು ಲಕ್ಷ ರೂಪಾಯಿಗಳವರೆಗೆ ಸಂಬಳ ಪಡೆಯುವ ಸರಕಾರಿ ನೌಕರನಗೆ ಯಾವುದೇ ರೀತಿಯ ಜಿ.ಎಸ್.ಟಿ, ಪಿ.ಟಿ, ಟಿಡಿಎಸ್ ಇತ್ಯಾದಿಗಳು ಅನ್ವಯವಾಗುವುದಿಲ್ಲ. ಇವುಗಳಿಂದ ಸರಕಾರಿ ನೌಕರರು ಪಾರಾಗಲು ಸಾಕಷ್ಟು ದಾರಿಗಳು ತೆರೆದಿವೆ ಕೂಡಾ. ಒಂದು ನೈಯಾ ಪೈಸೆ ತೆರೆಗೆ ಪಾವತಿಸಿದೆ ದೂರ ಉಳಿಯುವ ಸರಕಾರಿ ನೌಕರರಂತೆ ಹೊರಗುತ್ತಿಗೆ ಮೂಲಕ ನೇಮಕವಾಗಿರುವ ನೌಕರರನ್ನು ಒಂದೇ ರೀತಿಯಲ್ಲಿ ಸರಕಾರ ಕಾಣಬೇಕಾಗಿದೆ. ಕನಿಷ್ಠ ಸೇವಾ ಭದ್ರತೆ ಇಲ್ಲದೆ, ದುಡಿಯುವ ಹೊರಗುತ್ತಿಗೆ ನೌಕರರ ಹಿತಕಾಪಾಡಬೇಕಾಗಿರುವುದು ಬಾಕಿ ಇದೆ..!!
Please Ban GST from out source working staff