ಸರಕಾರಿ ಶಾಲಾ ಕಟ್ಟಡಕ್ಕೆ ಸಿಡಿಲು : ತಪ್ಪಿದ ದೊಡ್ಡ ಅನಾಹುತ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊಡತಗೇರಿ ಗ್ರಾಮದ ಹೃದಯ ಭಾಗದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಹೊರ ಭಾಗಕ್ಕೆ ಸಿಡಿಲು ಹೊಡೆದ ಪರಿಣಾಮ ಭಾರೀ ಅನಾಹುತದಿಂದ ಪಾರಾಗಿರುವ ಘಟನೆ ಜರುಗಿದೆ..!

ಪರಚಿದ ಗಾಯ : ವಿಪರಿತ ಸುರಿಯುತ್ತಿರುವ ಮಳೆಯ ಜೊತೆಗೆ ಬಡಿದ ಸಿಡಿಲಿನ ರಭಸಕ್ಕೆ ಹಾರಿ ಬಂದಿರುವ ಹರಳುಗಳು ಬಡಿದು, ಗ್ರಾಮಸ್ಥರಾದ ಕಲ್ಲಪ್ಪ ಮಂಗಳಪ್ಪ ಪೂಜಾರ (35), ಮಲ್ಲಪ್ಪ ಹೋಬಳೆಪ್ಪ ಗೌಡರ (34) ಹಾಗೂ ಹನುಮಪ್ಪ ಬಾಳಪ್ಪ ಪಿಳಿಬಂಟರ (31) ಸೇರಿದಂತೆ ಇನ್ನಿತರರಿಗೆ ಪರಚಿದ ತರಹದ ಗಾಯಗಳಾಗಿವೆ.

ರವಿವಾರ ರಜಾ ದಿನವಾಗಿರುವ ಹಿನ್ನಲೆಯಲ್ಲಿ ನೂರಾರು ಶಾಲಾ ಮಕ್ಕಳು ಬಹು ದೊಡ್ಡ ಘಟನೆಯಿಂದ ಪಾರಾಗಿದ್ದಾರೆ. ಸಿಡಿಲಿಗೆ ಶಾಲಾ ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿದೆ ಎಂದು ಶಾಲಾ ಮುಖ್ಯಗುರು ಈರಣ್ಣ ಅಂದಾನಪ್ಪನವರ ಪತ್ರಿಕೆಗೆ ಸ್ಪಷ್ಟಪಡಿಸಿದ್ದಾರೆ..!!