ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಜ್ |
ಕೊಪ್ಪಳ : ಜಿಲ್ಲೆಯ ಕೂಕನೂರಿನ ‘ತಾಯಿ’ ಪ್ರಕಾಶನದ 25 ನೇ ವರ್ಷದ ಸವಿ ನೆನಪಿಗಾಗಿ ಹಿರಿಯ ಸಾಹಿತಿ ಡಾ.ಕೆ.ಬಿ ಬ್ಯಾಳಿ ಅವರ ರಚನೆಯ ‘ಕಟ್ಟು ಬಿಚ್ಚಿದ ಕಾವ್ಯ’ ಎಂಬ ಕೃತಿಯ ಲೋಕಾರ್ಪಣೆ ಜೊತೆಗೆ ‘ಶಾಂತಶ್ರೀ’ ಮತ್ತು ‘ಅವ್ವ ಅನುವಾದ’ ಪ್ರಶಸ್ತಿ ಪ್ರದಾನ ಸಮಾರಂಭವು ಇದೆ ಜುಲೈ 25 ರಂದು ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ..!
ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಈ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಜೊತೆಗೆ ಪ್ರಶಸ್ತಿ ಪ್ರದಾನ ಮಾಡುವರು. ಪದವಿ ಕಾಲೇಜಿನ ಡಾ.ಚನ್ನಬಸವ ಅವರು ಅಧ್ಯಕ್ಷತೆವಹಿಸುವರು. ಹಾವೇರಿಯ ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ ಭಾಸ್ಕರ್ ಅವರು ‘ಕಟ್ಟು ಬಿಚ್ಚಿದ ಕಾವ್ಯ’ ಎಂಬ ಕೃತಿಯನ್ನು ನಾಡಿನ ಓದುಗ ದೊರೆಗಳಿಗೆ ಅನಾವರಣಗೊಳಿಸಲಿದ್ದಾರೆ. ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿ ಆರ್. ಡಾ.ಮರೇಗೌಡ, ಕೊಪ್ಪಳ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಸ್ ಹನಸಿ, ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ, ನಿವೃತ್ತ ಪ್ರಾಚಾರ್ಯ ಎ.ಹೆಚ್.ಬಳ್ಳಾರಿ, ಬಳ್ಳಾರಿ ವಿವಿ ಸಿಂಡಿಕೇಟ್ ಸದಸ್ಯ ಹಾಗೂ ಹಿರಿಯ ಸಾಹಿತಿ ಡಾ.ಬಸವರಾಜ ಪೂಜಾರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಪತ್ರಕರ್ತ ಜಿ.ಎಸ್.ಗೋನಾಳ, ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ವೀರಣ್ಣ ನಿಂಗೋಜಿ ಹಾಗೂ ಉಪನ್ಯಾಸಕರಾದ ವೀರನಗೌಡ ಮರಿಗೌಡ, ಶರಣಬಸವ ಬಿಳಿಎಲೆ ಸೇರಿದಂತೆ ಜಿಲ್ಲೆಯ ಸಾಹಿತಿಗಳು ಕನ್ನಡ ಪಂಡಿತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ..!!
ಪ್ರಶಸ್ತಿ ಪುರಸ್ಕೃತರು : ಜಿಲ್ಲೆಯ ಹಿರಿಯ ಸಾಹಿತಿ ಹೆಚ್.ಎಸ್.ಪಾಟೀಲ್ ಅವರು ‘ಶಾಂತಶ್ರೀ’ ಪ್ರಶಸ್ತಿ ಮತ್ತು ಹಿರಿಯ ಸಾಹಿತಿ ಹಾಗೂ ಗಂಗಾವತಿಯ ಎಸ್.ಕೆ.ಎನ್.ಜಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ದೇವೇಂದ್ರಪ್ಪ ಜಾಜಿ ಅವರು ‘ಅವ್ವ ಅನುವಾದ’ ಪ್ರಶಸ್ತಿಯನ್ನು ಮೂಡಿಗೆರಿಸಿಕೊಳ್ಳಲಿದ್ದಾರೆ..!