ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ನಗರದ ‘ಉದಯ ಕ್ಲಾಸಸ್’ ವಿದ್ಯಾರ್ಥಿಗಳು ಸಿ.ಬಿ.ಎಸ್.ಸಿ 10 ನೇ ತರಗತಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈದಿರುವುದು ವಿಶೇಷ..!
ಈ ಬಾರಿಯ ಸಿ.ಬಿ.ಎಸ್.ಇ 10ನೇ ತರಗತಿಯಲ್ಲಿ ಉದಯ ಕ್ಲಾಸಸ್ ಸಂಸ್ಥೆಯ 4 ಜನ ವಿದ್ಯಾರ್ಥಿಗಳು 457 ಕ್ಕೂ ಅಧಿಕ ಅಂಕ ಪಡೆಯುವುದರೊಂದಿಗೆ ಅತ್ಯುತ್ತಮ ದಾಖಲೆಯ ಫಲಿತಾಂಶ ಪ್ರಕಟವಾಗಿದೆ. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ 2021-22ನೇ ಸಾಲಿನ 10ನೇ ತರಗತಿಯ ಪಲಿತಾಂಶ ಪ್ರಕಟಿಸಿದ್ದು ಸಂಸ್ಥೆಯ 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಸೃಷ್ಠಿ.ಬಿ 472(94%), ಕಾವ್ಯಾ.ಕೆ 460(92%), ಲಕ್ಷ್ಮಿ 459(91.8%), ಶ್ರೇಯಾ 457(91.8%)ಅಂಕ ಪಡೆಯುವುದರೊಂದಿಗೆ ದಾಖಲೆಯ ಪಲಿತಾಂಶವು ಸಂಸ್ಥೆಯ ಕೀರ್ತಿ ಹೆಚ್ಚಿಸಿದೆ. ಸಂಸ್ಥೆಯ ಆಡಳಿತ ಮಂಡಳಿ, ನಿರ್ದೇಶಕರು, ಸಿಬ್ಬಂದಿ ವರ್ಗ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ..!!