ಉದ್ಯಾನವನ ಕಾಮಗಾರಿಗೆ ಪುರಸಭೆ ಅಧ್ಯಕ್ಷ ಜಿ.ಕೆ ಹಿರೇಮಠ ಚಾಲನೆ

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ಪಟ್ಟಣದ ಎರಡನೇ ವಾರ್ಡಿನ ಶ್ರೀ ಬಸವ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗಳಿಗೆ ಪುರಸಭೆ ಅಧ್ಯಕ್ಷ ಜಿ.ಕೆ ಹಿರೇಮಠ ಚಾಲನೆ ನೀಡಿದರು..!

15 ನೇ ಹಣಕಾಸಿನಲ್ಲಿ ಮೀಸಲಿರಿಸಿದ 8 ಲಕ್ಷ ರೂಪಾಯಿಗಳ ಅನುದಾನದಲ್ಲಿ ಉದ್ಯಾನವನದಲ್ಲಿ ವಾಕಿಂಗ್ ಟ್ರ್ಯಾಕ್ ಅಳವಡಿಸುವ ಕಾಮಗಾರಿ ಹಾಗೂ ಕಾಂಪೌಂಡ್, ಗೇಟ್ ಅಳವಡಿಕೆ ಸೇರಿ ಉದ್ಯಾನದಲ್ಲಿರುವ ಸಿಸ್ಟರ್ನ್ ಸ್ಥಳಾಂತರ ಕಾಮಗಾರಿಗೆ ನಗರೋತ್ಥಾನ ಯೋಜನೆಯಡಿ 15 ಲಕ್ಷ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದು ಪುರಸಭೆ ಅಧ್ಯಕ್ಷ ಜಿ.ಕೆ ಹಿರೇಮಠ ‘ಕೃಷಿ ಪ್ರಿಯ’ ಪತ್ರಿಕೆಗೆ ಸ್ಪಷ್ಟಪಡಿಸಿದರು.
ಸದಸ್ಯ ರಾಜೇಶ ಪತ್ತಾರ, ಪ್ರಶಾಂತ ಗುಜ್ಜಲ, ತಿಪ್ಪಣ್ಣ ಮಧುರುಕರ್, ರಮೇಶ ಮೇಲಿನಮನಿ ಸೇರಿದಂತೆ ಮುಖಂಡರು, ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು..!!