ಅಯೋಧ್ಯೆ ರಾಮನಿಗಿರುವ ಆದ್ಯತೆ ಕೊಪ್ಪಳದ ಹನುಮಂತಗಿಲ್ಲ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣಕ್ಕೆ ಸರಕಾರಗಳು ನೀಡಿರುವ ಆಧ್ಯತೆ ರಾಮನ ಭಂಟ ‘ಹನುಮನ’ ಜನ್ಮ ಸ್ಥಳವಾದ ಕೊಪ್ಪಳದ ಅಂಜನಾದ್ರಿ ಅಭಿವೃದ್ಧಿಗೆ ಏತಕ್ಕೆ ಪ್ರಾಶಸ್ತ್ಯ ನೀಡುತ್ತಿಲ್ಲ ಎಂಬ ಕೂಗು ಸಾಕಷ್ಟು ಕೇಳಿಬರುತ್ತಿವೆ..!

ಭಾರತೀಯರ ಪಾಲಿಗೆ (ರಾಮಾಯಣದ ಪ್ರಕಾರ) ರಾಮ, ಲಕ್ಷ್ಮಣ, ಸೀತಾಮಾತೆ ಎಷ್ಟು ಆದರ್ಶ ಪ್ರಾಯರೋ.. ಅವರ ಅಷ್ಟೇ, ‘ಹನುಮಂತನು’ ಮುಖ್ಯ. ಇಂತಹ ಬಲಶಾಲಿ ಅಂಜನಿ ಪುತ್ರ ಆಂಜನೇಯನ ಜನ್ಮ ಸ್ಥಳ ಕಿಷ್ಕಿಂದಾ ಪ್ರದೇಶವನ್ನು ಅಭಿವೃದ್ಧಿಪಡಿಸುವುದಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರ ಮಾತ್ರ ಹಿಂದೇಟು ಹಾಕುತ್ತಿರುವುದು ಸ್ಪಷ್ಟವಾಗಿದೆ.

ಘೋಷಣೆ : ಮೂಲ ರಾಮಾಯಣ ಹಾಗೂ ರಾಜ್ಯದ ಹಿರಿಯ ವಿದ್ವಾಂಸರ ಸಂಶೋಧನೆ ಪ್ರಕಾರ ಹನುಮಂತನ ಜನ್ಮ ಸ್ಥಳ ಕೊಪ್ಪಳ ಜಿಲ್ಲೆಯ ಕಿಷ್ಕಿಂದೆ ಪರ್ವತ ಪ್ರದೇಶದ ಅಂಜನಾದ್ರಿ ಬೆಟ್ಟವೆಂದು ಸ್ಪಷ್ಟ ತೀರ್ಮಾನವಾದಾಗಲೂ ಸರಕಾರಗಳು ಮಾತ್ರ ಅಧಿಕೃತ ಘೋಷಣೆಗೆ ಮುಂದಾಗದಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿವೆ. ಅಲ್ಲದೆ, ಪಕ್ಕದ ಆಂದ್ರ ಪ್ರದೇಶದವರು ಹನುಮನ ಜನ್ಮ ಸ್ಥಳ ತಮ್ಮ ರಾಜ್ಯದಲ್ಲಿನ (ಟಿಟಿಡಿ) ಬೆಟ್ಟ ಪ್ರದೇಶ ಎಂಬ ಗೊಡ್ಡುವಾದಕ್ಕೆ ಸರಕಾರಗಳ ಘೋಷಣೆ ವಿಳಂಬಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗುತ್ತದೆ. ಪುರಾಣ ಪುಣ್ಯ ಕಥೆಗಳಲ್ಲಿ ದಾಖಲಾಗಿರುವಂತೆ ಹನುಮನ ಜನ್ಮ ಸ್ಥಳ ಕೊಪ್ಪಳದ ಅಂಜನಾದ್ರಿ ಪರ್ವತ ಪ್ರದೇಶವೆಂದು ಅಧಿಕೃತವಾಗಿ ಘೋಷಿಸಬೇಕಾಗಿದೆ.

ಮತ ಬ್ಯಾಂಕ್ ಆಗದಿರಲಿ : ಮುಂಬರುವ ಚುನಾವಣೆ ಹಿತದೃಷ್ಟಿಯಿಂದ ಹಿಂದುಗಳ ಮತಗಳನ್ನು ಬ್ಯಾಂಕ್ ಮಾಡಿಕೊಳ್ಳಲು ಮಾತ್ರ ಹನುಮನ ಜನ್ಮ ಸ್ಥಳ ‘ಕೊಪ್ಪಳದ ಕಿಷ್ಕಿಂದೆ’ ಎಂಬುದು ಚುನಾವಣಾ ಪ್ಲೇ ಕಾರ್ಡ ಆಗದಿರಲಿ ಎಂಬುದು ಪ್ರಮುಖರ ಒತ್ತಾಸೆಯಾಗಿದೆ. ಅಲ್ಲದೆ, ‘ಅಂಜನಾದ್ರಿ’ ಆಂದ್ರಪ್ರದೇಶ ಮತ್ತು ಕರ್ನಾಟಕ ಎರಡು ರಾಜ್ಯಗಳ ವಿವಾದಾತ್ಮಕ ಸ್ಥಳವಾಗಬಾರದು ಜೊತೆಗೆ ರಾಜಕೀಯ ಲಾಭಕ್ಕಾಗಿ ಹಿಂದುಗಳ ಪವಿತ್ರ ಧಾರ್ಮಿಕ ಸ್ಥಳ ಪ್ರತಿ ಚುನಾವಣೆಯ ಪ್ರಮುಖ ವಿಷಯವಾಗಿ ಬಳಕೆಯಾಗದಿರಲಿ ಎಂಬುದು ಈ ಭಾಗದವರ ಒಕ್ಕೊರಲಿನ ಬೇಡಿಕೆಯಲ್ಲೊಂದಾಗಿದೆ.

ಕೋಪಣಾಚಲಗಿರಿಗೆ ಸಿಎಂ ಭೇಟಿ : ಅಂಜನಾದ್ರಿ ಪ್ರದೇಶ ಅಭಿವೃದ್ಧಿಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಲ್ಲಿಯವರೆಗೆ ಕೇವಲ ರಾಜಧಾನಿ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೇವಲ ಅನುದಾನ ಘೋಷಣೆಗೆ ಮುಂದಾಗಿದ್ದರು. ಆದರೆ, ಸಿಎಂ ಅವರೇ ದಿನಾಂಕ 01-08-2022 ರಂದು ಖುದ್ದು ಅಂಜನಾದ್ರಿಗೆ ಭೇಟಿ ನೀಡುವ ಅಧಿಕೃತ ಪ್ರವಾಸ ನಿಗದಿಯಾಗಿದೆ. ಶ್ರೀರಾಮನ ಆಜ್ಞೆಯನ್ನು ಚಾಚು ತಪ್ಪದೆ ಪಾಲಿಸಿ, ಲಂಕಾ ಸಂವಾರದ ಮೂಲಕ ಸೀತಾಮಾತೆಯನ್ನು ಪತ್ತೆ ಹಚ್ಚಿದ ಧೀರ ಆಂಜನೇಯನ ಸನ್ನಿಧಿಗೆ ಭೇಟಿ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಜಾಂಬವಂತ’ನಂತೆ ಕೋಪಣಾಚಲಗಿರಿ ವಾಸಿಗಳ ವಾಕ್ಯ  ಪರಿಪಾಲನಾಗಬೇಕಾಗಿರುವುದು ಬಾಕಿ ಇದೆ..!!