ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವರ ಅದಲು ಬದಲು ನೇಮಕ ಆದೇಶವನ್ನು ಸರಕಾರ ದಿನಾಂಕ 30-07-2022 ರದ್ದುಗೊಳಿಸಿ, ಮೊದಲಿದ್ದ ಉಸ್ತುವಾರಿ ಸಚಿವರನ್ನು ಮುಂದುವರೆಸಿದೆ ಎಂದು ಮರು ಆದೇಶಿಸಲಾಗಿದೆ..!
ದಿನಾಂಕ 29-07-2022 ರಂದು ಸರಕಾರವು ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿ ಸಚಿವರಾದ ಶಶಿಕಲಾ ಜೊಲ್ಲೆ ಅವರನ್ನು ಹಾಗೂ ನೂತನ ವಿಜಯನಗರ ಜಿಲ್ಲೆಗೆ ಮಾತೃ ಜಿಲ್ಲೆಯ ಸಚಿವ ಆನಂದ ಸಿಂಗ್ ಅವರನ್ನು ಅದಲು ಬದಲುಗೊಳಿಸಿ ನೇಮಕದ ಆದೇಶ ಹೊರಡಿಸಿತ್ತು. ನೇಮಕ ಆದೇಶ ಹೊರಡಿಸಿ 24 ಗಂಟೆಯೊಳಗಾಗಿಯೇ ಮರು ಆದೇಶ ಹೊರಡಿಸುವ ಮೂಲಕ ಮೊದಲಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಮುಂದುವರೆಯುವಂತೆ ಸೂಚಿಸಿ, ಅದಲು ಬದಲುಗೊಳಿಸಿದ ಆದೇಶ ರದ್ದು ಎಂದು ಮರು ಆದೇಶವನ್ನು ದಿನಾಂಕ 30-07-2022 ರಂದು ಹೊರಡಿಸಿದೆ. 24 ಗಂಟೆಗಳಲ್ಲಿಯೇ ಸರಕಾರ ಎರಡು ಆದೇಶ ಹೊರಡಿಸಿದ್ದನ್ನು ಗಮನಿಸಿದರೇ.. ಸರಕಾರದಲ್ಲಿ ಯಾವುದು ಸರಿಯಾಗಿಲ್ಲ ಎಂಬ ಸ್ಪಷ್ಟವಾದ ಸಂದೇಶವಂತು ರಾಜ್ಯಕ್ಕೆ ರವಾನೆ ಆದಂತಾಗಿದೆ. ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವರ ನೇಮಕ ವಿಷಯದಲ್ಲಿ ಯಾವ ತರಹದ ಪ್ರಭಾವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎದುರಾಗಿರಬಹುದು..!? ಸರಕಾರದಲ್ಲಿ ಯಾರು ಹಿಡಿತ ಸಾಧಿಸರಬಹುದು ಎಂಬ ಇತ್ಯಾದಿ ತೀವ್ರ ಚರ್ಚೆಗಳು ಮಾತ್ರ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ..!!