ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಇಲ್ಲಿನ ಹತ್ತಿ (ಕ್ರಾಸ್) ಬೆಳೆವೊಂದು ರೈತ ಸಮೂಹವನ್ನೇ ಆಶ್ಚರ್ಯಚಿಕಿತರನ್ನಾಗಿಸಿದೆ..!
ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಡಲಗೇರಿ ಗ್ರಾಮದ ರೈತ ಮಲ್ಲಪ್ಪ ಗುಳುಗುಳಿ ಎಂಬುವರು ‘ನುಜೀವೀಡು’ ಕಂಪನಿ ಹತ್ತಿ ಬೀಜವನ್ನು ಖರೀದಿ ಮಾಡಿ, 1-20 ಗುಂಟೆ ಜಮೀನಿನಲ್ಲಿ ನಾಟಿ ಮಾಡಿದ್ದಾರೆ. ಆದರೆ, ನಾಟಿಮಾಡಿದ ನುಜೀವೀಡು ಹತ್ತಿ ಬೀಜವು ಬೆಳೆದ ಮೇಲೆ ‘ಕಾವೇರಿ ತಳಿ’ ಎಂಬುದು ಸ್ಪಷ್ಟವಾಗಿದೆ. ಬೆಳೆಯ ಯಾವುದೇ ಭಾಗವು ನುಜೀವೀಡು ಹತ್ತಿ ಕಂಪನಿಯದ್ದು ಎಂದು ಗುರುತಿಸದಂತಾಗಿದೆ. ಸ್ವತಃ ಎರಡು ಕಂಪನಿಗೆ ಸಂಬಂಧಿಸಿದವರು ಬೆಳೆ ಗಮನಿಸಿ, ಪರಿಶೀಲಿಸಿ ಆಶ್ಚರ್ಯಗೊಂಡಿದ್ದಾರೆ. ಇಂತಹ ಬದಲಾವಣೆ ನಮಗೆ ಗೊಂದಲಮಯಗೊಳಿಸಿದೆ.
ಬೆಳೆ ಮಾತ್ರ ಈ ಭಾಗದಲ್ಲಿಯೇ ಅತ್ಯಧಿಕ ಇಳುವರಿ ಬೆಳೆಯಾಗಿ ಹೊರಹೊಮ್ಮಿದೆ. ಅಧಿಕೃತ ಕಂಪನಿಯದ್ದು ಎಂದು ನಂಬಿ ಬೀಜ ಖರೀದಿಸಿದವರಿಗೆ ಏಕೆ ಹೀಗಾಗಿತು..!? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಇಂದಿನ ಆಧುನಿಕ ಯುಗದಲ್ಲಿ “ನಕಲಿ ಬೀಜಗಳ” ಹಾವಳಿ ಮಧ್ಯೆ ನಾಟಿ ಮಾಡಿದ್ದೊಂದು ಬೆಳೆದಿದ್ದೊಂದಾಗಿರುವುದು ಯಾವ ಕಂಪನಿಗಳ ಮೇಲೆಯೂ ನಂಬಿಕೆ ಇಲ್ಲದಂತಾಗಿದೆ ಎನ್ನುತ್ತಾರೆ ಜಮೀನು ಮಾಲಿಕ ನಾಗಲಿಂಗಸ್ವಾಮಿ ಏಕದಂಡಿಗಿಮಠ. ಇಲ್ಲಿನ ಬೆಳೆಯನ್ನು ಅಧಿಕೃತ ಯಾವ ಬೀಜದ ಕಂಪನಿ ಬೆಳೆ ಎಂದು ಸಂಬಂದಿಸಿದ ಬೀಜ ಕಂಪನಿಯವರು ರೈತರ ಸಮೂಹಕ್ಕೆ ಸ್ಪಷ್ಟಪಡಿಸಬೇಕಾಗಿರುವುದು ಬಾಕಿ ಇದೆ..!!
(ಮುಂದುವರೆಯಲಿದೆ..)