ತಣ್ಣಗಾದ ‘ಆನಂದ’ ಸಿಂಗ್

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲಾ ಉಸ್ತುವಾರಿ ಅದಲು ಬದಲು ವಿಷಯದಲ್ಲಿ ಕೆಂಡ ಮಂಡಲವಾಗಿದ್ದರು ಎನ್ನಲಾದ ಸಚಿವ ಆನಂದ ಸಿಂಗ್ ಅವರು ತಮ್ಮ ತವರು ವಿಜಯನಗರ ಜಿಲ್ಲೆಯ ಸ್ವಾತಂತ್ರ್ಯೋತ್ಸವದ ರಾಷ್ಟ್ರ ಧ್ವಜಾರೋಹಣಕ್ಕೆ ನೇಮಕಗೊಳ್ಳುವ ಮೂಲಕ ತಣ್ಣಗಾದಂತಾಗಿದೆ..!?

 

ಆನಂದಸಿಂಗ್ ಅವರ ಆಸಕ್ತಿಯಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇತ್ತೀಚಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಬದಲಾಗಿ ಅವರ ತವರು ನೂತನ ಜಿಲ್ಲೆಯಾಗಿರುವ ವಿಜಯನಗರ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡುವ ಮೂಲಕ ಆದೇಶ ಹೊರಡಿಸಿದ್ದರು. ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಇನ್ನುಳಿದ ಸಚಿವರುಗಳ ಒತ್ತಡಕ್ಕೆ ಮಣಿದ ಸಿಎಂ ಮೊದಲಿನಂತೆ ಜಿಲ್ಲಾ ಉಸ್ತುವಾರಿ ಮುಂದುವರೆಸಲು ಸೂಚಿಸಿದ್ದರು. ಆದರೆ, ಈ ಎಲ್ಲಾ ರಾಜಕೀಯ ಬೆಳವಣಿಗೆಗಳಿಂದ ಮುನಿಸಿಕೊಂಡಿದ್ದ ಆನಂದ ಸಿಂಗ್ ಅವರು ಸಿಎಂ ಜೊತೆಗೆ ಅಂತರ ಕಾಯ್ದುಕೊಳ್ಳುವ ಮೂಲಕ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರೇ.. ಕೊಪ್ಪಳಕ್ಕೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಕೂಡಾ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆನಂದ್ ಸಿಂಗ್ ಸಭೆಗೆ ಗೈರಾಗುವ ಮೂಲಕ ತಮ್ಮ ಅಸಮಧಾನ ಹೊರಹಾಕಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ..!?