ರಾಷ್ಟ್ರ ಧ್ವಜದ ಪಿತಾಮಹ ‘ಪಿಂಗಳಿ ವೆಂಕಯ್ಯ’

 

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಗತ್ತಿನ ಎಲ್ಲಾ ದೇಶಗಳು ತನ್ನದೇ ಆದ ರಾಷ್ಟ್ರ ಧ್ವಜಗಳನ್ನು ಹೊಂದಿವೆ. ಅದರಂತೆ ಭಾರತ ಕೂಡಾ ಸ್ವಾತಂತ್ರ್ಯಕ್ಕೂ ಮುನ್ನವೇ 22 ಜುಲೈ 1947 ರಂದು ತನ್ನದೇ ಆದ ರಾಷ್ಟ್ರ ಧ್ವಜವನ್ನು ಅಧಿಕೃತಗೊಳಿಸಿಕೊಂಡಿತು. ಇಂತಹ ಪವಿತ್ರ ಮತ್ತು ಹೆಮ್ಮೆಯ ರಾಷ್ಟ್ರ ಧ್ವಜದ ಅತ್ಯದ್ಭುತ ವಿನ್ಯಾಸಕಾರ ‘ಪಿಂಗಳಿ ವೆಂಕಯ್ಯ’ ಅವರು ತಯಾರಿಸಿದ್ದಾರೆ ಎಂಬುದು ವಿಶೇಷ..!

ಪ್ರಸಿದ್ಧ 30 ದೇಶಗಳ ಧ್ವಜಗಳ ನೀತಿ, ಆಕಾರ, ಬಣ್ಣ, ಕಾರಣ, ಬದ್ಧತೆ, ಅಭಿಮಾನ ಮತ್ತು ಅಳತೆ ಸೇರಿದಂತೆ ಇತ್ಯಾದಿಗಳ ಸತತ ಅಭ್ಯಾಸದ ಬಳಿಕ ತ್ಯಾಗ, ಶಾಂತಿ ಹಾಗೂ ಸಮೃದ್ಧಿ ಸಂಕೇತವಾಗಿ ಕೇಸರಿ, ಬಿಳಿ, ಹಸಿರಿನಿಂದ ಕೂಡಿದ ಧ್ವಜವನ್ನು ಪಿಂಗಳಿ ವೆಂಕಯ್ಯ ತಯಾರಿಸುತ್ತಾರೆ. ಇದನ್ನೇ ಅಧಿಕೃತ ರಾಷ್ಟ್ರ ಧ್ವಜವೆಂದು ಅಂದು ಅಂಗೀಕರಿಸಲಾಯಿತು. ಇಂತಹ ವಿಶಿಷ್ಟ ಧ್ವಜ ವಿನ್ಯಾಸಕ ಆಂದ್ರಪ್ರದೇಶದ ಮಚಲಿಪಟ್ಟಣದ ಹಳ್ಳಿವೊಂದರಲ್ಲಿ ಜನಿಸಿದವರು. ಪಿಂಗಳಿ ವೆಂಕಯ್ಯ ಅವರು ಹತ್ತಿ ಅಧ್ಯಯನದಲ್ಲಿ ಅಪಾರ ಜ್ಞಾನದ ಜೊತೆಗೆ ವಜ್ರ ಗಣಿಗಾರಿಕೆಯಲ್ಲಿ ಸಾಕಷ್ಟು ಪರಿಣತಿ ಹೊಂದಿದ್ದರು ಅಲ್ಲದೆ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಅನುಯಾಯಿಗಳು ಕೂಡಾ ಆಗಿದ್ದರು ಎಂಬುದು ವಿಶೇಷ. ಹಿಂದುಸ್ತಾನದ ಮೇಲೆ ಅಪಾರ ಗೌರವ ಹೊಂದಿದ ಮಹಾನ್ ದೇಶಭಕ್ತ ಮತ್ತು ನಮ್ಮ ಹೆಮ್ಮೆಯ ರಾಷ್ಟ್ರ ಧ್ವಜದ ವಿನ್ಯಾಸಕಾರರು ಹಾಗೂ ಹಿರಿಯ ಸ್ವಾತಂತ್ರ್ಯ ಸೇನಾನಿ ಅವರನ್ನು ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಜನತೆ ಪರವಾಗಿ ನಮ್ಮದೊಂದು ಸಲಾಂ..!!

 

(ಸುದ್ದಿ ಕೃಪೆ : ದೈಹಿಕ ಶಿಕ್ಷಣ ಪಠ್ಯ )