ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕುಷ್ಟಗಿ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಗೋಡಿ ಆಯ್ಕೆಯಾಗಿದ್ದಾರೆ..!
ದಿನಾಂಕ 13-08-2022 ರಂದು ವಕೀಲರ ಸಂಘದ ಕಚೇರಿಯಲ್ಲಿ ಜರುಗಿದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಗೋಡಿ ಅವರು 94 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ವಕೀಲ ಸಂಗನಗೌಡ ಪಾಟೀಲ ಅವರು 88 ಮತಗಳನ್ನು ಪಡೆದಿದ್ದಾರೆ. ವಕೀಲ ಮಹಾಂತೇಶ ದಂಡಿನ 90 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪರಸಪ್ಪ ಆಡಿನ, ಜಂಟಿ ಕಾರ್ಯದರ್ಶಿಯಾಗಿ ಸುರೇಶ ಜರಕುಂಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾದ ಶಫಿ ಹೇರೂರು, ಸಂಗಮೇಶ ಕಂದಕೂರು ಹಾಗೂ ಎಸ್.ಎನ್ ನಾಯಕ ತಿಳಿಸಿದ್ದಾರೆ.
ವಿಜಯೋತ್ಸವ : ಫಲಿತಾಂಶ ಬಳಿಕ ವಕೀಲರ ಸಂಘದ ಸದಸ್ಯರು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಿಹಿ ತಿನಿಸುವ ಮೂಲಕ ವಿಜಯೋತ್ಸವ ಆಚರಿಸಿದರು..!!