ಬೈಕ್ ಸವಾರನಿಗೆ ಶಿಕ್ಷೆ

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜುಲೈ 2016 ರಂದು ರಾತ್ರಿ ವೇಳೆ ಪಾದಾಚಾರಿಯೊಬ್ಬನಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದ ಆರೋಪಿತನಿಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪ್ರಧಾನ ಸಿವಿಲ್‌ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ..!

ಕುಷ್ಟಗಿ ಪಟ್ಟಣದ ನಿವಾಸಿ ಷಡಕ್ಷರಯ್ಯ ತಂದೆ ವಿಶ್ವನಾಥ್ ಹಿರೇಮಠ ಶಿಕ್ಷೆಗೊಳಗಾದ ವ್ಯಕ್ತಿ. ಕುಷ್ಟಗಿ ಪ್ರಧಾನ ಸಿವಿ಼ಲ್‌ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಯಲಯದ ನ್ಯಾಯಧೀಶರಾದ ಶಂಬುಲಿಂಗಯ್ಯ ಮುಡಿಮಠ ಅವರು ದೋಷಿಗಳೆಂದು ತಿರ್ಮಾನಿಸಿ,
ಆರೋಪಿತನಿಗೆ ಐ.ಪಿ.ಸಿ ಯ ಕಲಂ:279, 337, 181, 196 ರ ಅಡಿಯಲ್ಲಿ 2,300 ರೂಪಾಯಿ ದಂಡ ಅದೇ ರೀತಿ ಎರಡು ತಿಂಗಳು ಇಪ್ಪತ್ತು ದಿನಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಘಟನೆ ವಿವರ: ಆರೋಪಿತನು, ತನ್ನ ಮೋಟಾರ್ ಸೈಕಲ್ ಅನ್ನು ಪಟ್ಟಣದ ಗಜೇಂದ್ರಗಡ ಮುಖ್ಯ ರಸ್ತೆ ಕಡೆಯಿಂದ ಅತೀ ವೇಗವಾಗಿ ಅಲಕ್ಷತನದಿಂದ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ವಾಹನ ಚಲಾಯಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಮರೇಶ್ ತಂದೆ ಯಂಕಪ್ಪ ತೋಟದ್‌ ಎಂಬುವರಿಗೆ ಠಕ್ಕರ್ ಕೊಟ್ಟು ಗಾಯಗೊಳಿಸಿದ್ದರು. ಅಂದಿನ ಪಿಎಸ್ ಐ ಆರ್.ವಾಯ್ ಜಲಗೇರಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು..!!