16 ವರ್ಷಗಳಿಂದ ಉಚಿತ ಕ್ಷೌರ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಳೆದ 16 ವರ್ಷಗಳಿಂದ ಉಚಿತವಾಗಿ ಕ್ಷೌರ ಮಾಡುತ್ತಾ ಬಂದಿರುವ ಈ ಯುವಕನ ರಾಷ್ಟ್ರ ಪ್ರೇಮ ಮೆಚ್ಚಲೇ ಬೇಕು..!

ಸ್ವಾತಂತ್ರ್ಯ ಲಭಿಸಿದ ದಿನದಂದು ಉಚಿತವಾಗಿ ಕ್ಷೌರದ ಸೇವೆ ಸಲ್ಲಿಸುತ್ತಾ ಬಂದಿರುವ ಈ ಯುವಕ ಬೇರೆ ಯಾರು ಅಲ್ಲ.. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದ (ಶಾಡಲಗೇರಿ) ಶಿವಕುಮಾರ ಸಂಗಪ್ಪ ಹಡಪದ ಎಂಬಾತ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಂತ ಮಹನೀಯರ ಸವಿ ನೆನಪಿಗಾಗಿ ಈ ದಿನದಂದು ಉಚಿತವಾಗಿ ಸೇವೆ ಸಲ್ಲಿಸುವ ಶಿವಕುಮಾರ ಅವರಿಗೆ ದೇಶ, ಸ್ವಾತಂತ್ರ್ಯ ಸೇನಾನಿಗಳು, ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ ಎಂದರೆ ಪಂಚಪ್ರಾಣ. ‘ನನ್ನದು ಈ ದೇಶಕ್ಕಾಗಿ ಮುಡಿಪಾಗಿಟ್ಟಿರುವ ಅಳಿಲು ಸೇವೆ ಅಷ್ಟೇ, ಅಂತಾರೇ ಶಿವಕುಮಾರ’. ಇತನ ನಿರಂತರ ಸೇವೆಗೆ ಇಲ್ಲಿನ ಸ್ವಾತಂತ್ರ್ಯ ಅಭಿಮಾನಿಗಳು ಹೆಮ್ಮೆವ್ಯಕ್ತಪಡಿಸುತ್ತಾರೆ..!!

One thought on “16 ವರ್ಷಗಳಿಂದ ಉಚಿತ ಕ್ಷೌರ

Comments are closed.