ಪಂಪಾ ಸರೋವರದ ಮಹಾಂತ ರಾಮದಾಸ್ ಬಾಬಾ ಇನ್ನಿಲ್ಲ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಅಂಜನಾದ್ರಿ ಪರ್ವತ ಪ್ರದೇಶದ ಪ್ರಮುಖ ಐತಿಹಾಸಿಕ ಸ್ಥಳ ‘ಪಂಪಾ ಸರೋವರದ ಹಿರಿಯ ಅರ್ಚಕ ಮಹಾಂತ ರಾಮದಾಸ್ ಬಾಬಾ’ (95) ಅವರು ನಮ್ಮನ್ನು ಅಗಲಿದ್ದಾರೆ..!

ರಾಮಾಯಣದ ಇತಿಹಾಸ ಸಾರುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿರುವ ಪಂಪಾ ಸರೋವರದ ಜಯಲಕ್ಷ್ಮಿದೇವು ದೇವಸ್ಥಾನದಲ್ಲಿ ಕಳೆದ 5 ದಶಕಗಳ ಕಾಲ ಅರ್ಚಕರಾಗಿ ಸೇವೆ ಸಲ್ಲಿಸಿ ಈ ಭಾಗದವರಿಗೆ ಬಾಬಾ ಚಿರಪರಿಚಿತರಾಗಿದ್ದರು. ರಮಾನಂದ ಪರಂಪರೆಯ ಹಿನ್ನಲೆಯ ಮಹಾಂತ ರಾಮದಾಸ್ ಬಾಬಾ ಅವರು ಮೂಲತಃ ಉತ್ತರ ಭಾರತದವರು ಎಂಬುದು ವಿಶೇಷ. ಆನೆಗೊಂದಿ ರಾಜವಂಶಸ್ಥರ ಆಶ್ರಯದಲ್ಲಿ ಈ ಹಿಂದಿನ ಅರ್ಚಕ ‘ಮಹಾಂತ ಬುಜಂಗದಾಸ್ ಬಾಬಾ’ ಅವರಿಂದ ದೀಕ್ಷೆ ಪಡೆದು, ಮಹಾಂತರಾಗಿದ್ದರು ಎಂದು ಇಲ್ಲಿನ ಹಿರಿಯ ವರದಿಗಾರ ಮಲ್ಲಿಕಾರ್ಜುನ ಅವರು ಅಭಿಪ್ರಾಯವ್ಯಕ್ತಪಡಿಸಿದರು. ಹಿರಿಯ ಅರ್ಚಕರು ಹಾಗೂ ಬಾಬಾ ಅವರನ್ನು ಕಳೆದುಕೊಂಡ ಕಿಷ್ಕಿಂದಾ ಪ್ರದೇಶ ಬಡವಾಗಿದೆ. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಕಿಷ್ಕಿಂದಾದ, ಅಂಜನಾದ್ರಿ ಸೇರಿದಂತೆ ಹಂಪಿಯ ಶ್ರೀರಾಮ ಮಂದಿರ ಹಾಗೂ ಋಷಿಮುಖ ದೇವಸ್ಥಾನಗಳ ಅರ್ಚಕರು, ಮುಖಂಡರು, ಇನ್ನಿತರರು ಕಂಬಿನಿ ಮಿಡಿದಿದ್ದಾರೆ..!!