ಕುಷ್ಟಗಿ ಪಟ್ಟಣದಲ್ಲಿ ಹಾಡುಹಗಲೇ ಮನೆ ಕಳ್ಳತನ

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಹಾಡುಹಗಲೇ ಮನೆವೊಂದು ಕಳ್ಳತನವಾದ ಘಟನೆ ನಡೆದಿದೆ..!

ಪಟ್ಟಣದ ಮಲ್ಲಯ್ಯ ವೃತ್ತದ ಬಳಿಯ ಹಳೇ ಕುರುಬನಾಳ ರಸ್ತೆಯ ಬಳಿ ಇರುವ ಮನೆ ಮಧ್ಯಾಹ್ನದ ವೇಳೆ ಕಳ್ಳರು ಮನೆಯ ಬೀಗ ಮುರಿದು ನಗ ನಾಣ್ಯ ದೋಚಿ ಪರಾರಿಯಾಗಿದ್ದಾರೆ. ಕಲ್ಲಪ್ಪ ಕುರಿ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಮನೆಯವರೆಲ್ಲ ಜಮೀನು ಕೆಲಸಕ್ಕಾಗಿ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದನ್ನು ಖಚಿತಪಡಿಸಿಕೊಂಡ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಆದರೆ, ಮನೆಯಲ್ಲಿ ಏನೇನು ದೋಚಲಾಗಿದೆ ಎಂಬುದರ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ದಾಖಲಿಸಿಕೊಂಡ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರು ಪೊಲೀಸ್ ಸಿಬ್ಬಂದಿವೊಂದಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ..!!