ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ನಗರದ ಗಡಿಯಾರ ಕಂಬದ ಬಳಿಯಲ್ಲಿರುವ ತೆಂಗಿನಕಾಯಿ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿ ಸುಟ್ಟು ಹೊಗಿರುವ ಘಟನೆ ಜರುಗಿದೆ..!
ಪ್ರಭು ನಿಡಶೇಸಿ ಎಂಬುವರಿಗೆ ಸೇರಿದ ಅಂಗಡಿಯಲ್ಲಿನ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣವೆಂದು ತಿಳಿದು ಬಂದಿದೆ. ಅಪಾರ ಪ್ರಮಾಣದ ತೆಂಗಿನಕಾಯಿ ಸೇರಿದಂತೆ ತಂಪು ವಾಹಕ ಮಷೀನ್ ಇನ್ನಿತರ ಬೆಲೆ ಬಾಳುವ ವಸ್ತುಗಳ ಹಾನಿಯಾಗಿರುವುದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದಲ್ಲಿ ಬಹು ದೊಡ್ಡ ಘಟನೆ ತಪ್ಪಿ ಹೋಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ..!!