ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಶ್ರಾವಣ ಮಾಸದ ಕಡೆಯ ದಿನ ಸೋಮವಾರದಂದು ನಡೆದ ಜಿಲ್ಲೆಯ ಕುಷ್ಟಗಿ ತಾಲೂಕಿನ ಇತಿಹಾಸ ಪ್ರಸಿದ್ಧ ಕೋಟಿಲಿಂಗ ‘ಪುರ’ ಶ್ರೀಸೋಮನಾಥೇಶ್ವರ ಜಾತ್ರಾಮಹೋತ್ಸವದಂದು ಪ್ರಥಮ ‘ಪುರ ಉತ್ಸವ-2022’ ದಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ವಾಲ್ಮೀಕಿಯಪ್ಪ ಯಕ್ಕರನಾಳ ಅವರಿಗೆ ‘ತಿರುಳ್ಗನ್ನಡ ಕಲಾ ರತ್ನ’ ಹಾಗೂ ಹಿರಿಯ ಶಿಕ್ಷಕ ನಟರಾಜ ಸೋನಾರ ಅವರಿಗೆ ‘ತಿರುಳ್ಗನ್ನಡ ಸಾಹಿತ್ಯ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಗಿತು.!
ಕೊಪ್ಪಳದ ಸ್ವರ ಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಕನ್ನಡ ಜಾನಪದ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಗನಾಳ ಗ್ರಾಮ ಪಂಚಾಯಿತಿ, ಪುರ ಅಭಿವೃದ್ಧಿ ಸಮಿತಿ ಸಹಕಾರದಲ್ಲಿ ಜರುಗಿದ “ಪುರ ಉತ್ಸವ -2022″ರ ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷರಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕುಷ್ಟಗಿ ತಾಲೂಕು ಘಟಕದ ಹಾಲಿ ಅಧ್ಯಕ್ಷರಾಗಿ ಸಾಹಿತ್ಯ ಕಾರ್ಯಕ್ರಮಗಳನ್ನು ಪ್ರಚುರಪಡಿಸುತ್ತಾ ಬರುತ್ತಿರುವ ಶಿಕ್ಷಕ ನಟರಾಜ ಸೋನಾರ ಅವರ ಕನ್ನಡ ಸೇವೆಯನ್ನು ಪರಿಗಣಿಸಿ ‘ತಿರುಳ್ಗನ್ನಡ ಸಾಹಿತ್ಯ ಸಿರಿ’ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅವರನ್ನು ಸನ್ಮಾನಿಸಿ ಗೌರವಿಸಲಾಗಿತು. ಅದರಂತೆ ಜಿಲ್ಲೆಯ ಹಿರಿಯ ಜನಪದ ಸಾಹಿತಿ ವಾಲ್ಮೀಕಿಯಪ್ಪ ಯಕ್ಕರನಾಳ ಅವರ ನಾಲ್ಕು ದಶಕಗಳ ಕಾಲ ವಿಶೇಷವಾಗಿ ಜನಪದ ಸಾಹಿತ್ಯಕ್ಕಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ‘ತಿರುಳ್ಗನ್ನಡ ಕಲಾ ರತ್ನ’ ಪ್ರಶಸ್ತಿಗೆ ಪರಿಗಣಿಸಲಾಗಿತು.
ಗ್ರಾಮೀಣಾಭಿವೃದ್ಧಿ ಮತ್ತು ಸಂಸ್ಕೃತಿಕ ಸಂಸ್ಥೆ ಮುಖ್ಯಸ್ಥ ಹಾಗೂ ಬದಲಾವಣೆ ದಿನಪತ್ರಿಕೆ ಸಂಪಾದಕ ಮಂಜುನಾಥ ಗೊಂಡಬಾಳ, ಪತ್ರಕರ್ತ ಪ್ರಭು ಜಹಗೀರದಾರ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು, ಸರ್ವ ಸದಸ್ಯರು, ಪತ್ರಕರ್ತರು, ಸಾಹಿತಿಗಳು ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.!!