ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಶ್ರಾವಣ ಮಾಸದ ಕಡೆ ಸೋಮವಾರ ನಡೆದ ಜಿಲ್ಲೆಯ ಕುಷ್ಟಗಿ ತಾಲೂಕಿನ ಇತಿಹಾಸ ಪ್ರಸಿದ್ಧ ಕೋಟಿಲಿಂಗ ‘ಪುರ’ ಶ್ರೀ ಸೋಮನಾಥೇಶ್ವರ ಜಾತ್ರಾ ಮಹೋತ್ಸವದಂದು ಪ್ರಥಮ ‘ಪುರ ಉತ್ಸವ-2022’ ದಲ್ಲಿ ಸಾಹಿತಿ ಶಿಕ್ಷಕ ಡಾ.ಕೆ.ಶರಣಪ್ಪ ನಿಡಶೇಸಿ (ಶನಿ)ಅವರಿಗೆ ‘ತಿರುಳ್ಗನ್ನಡ ಸಾಹಿತ್ಯ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಗಿತು..!
ಕೊಪ್ಪಳದ ಸ್ವರ ಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಕನ್ನಡ ಜಾನಪದ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಗನಾಳ ಗ್ರಾಮ ಪಂಚಾಯಿತಿ ಹಾಗೂ ಪುರ ಅಭಿವೃದ್ಧಿ ಸಮಿತಿ ಸಹಕಾರದಲ್ಲಿ ಜರುಗಿದ “ಪುರ ಉತ್ಸವ -2022” ರ ಕಾರ್ಯಕ್ರಮದಲ್ಲಿ ಶಿಕ್ಷಕ ಹಾಗೂ ಸಾಹಿತಿ ಡಾ.ಕೆ.ಶರಣಪ್ಪ ನಿಡಶೇಸಿ ಅವರು ಸಾರಸ್ವತ ಲೋಕಕ್ಕೆ ಎರಡು ದಶಕಗಳಿಂದ ಸಲ್ಲಿಸುತ್ತಾ ಬರುತ್ತಿರುವ ಸಾಹಿತ್ಯ ಸೇವೆಯನ್ನು ಪರಿಗಣಿಸಿ ‘ತಿರುಳ್ಗನ್ನಡ ಸಾಹಿತ್ಯ ಸಿರಿ’ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅವರನ್ನು ಸನ್ಮಾನಿಸಿ ಗೌರವಿಸಿದರು. ಸ್ವರ ಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಮುಖ್ಯಸ್ಥ ಹಾಗೂ ಬದಲಾವಣೆ ಪತ್ರಿಕೆ ಸಂಪಾದಕ ಮಂಜುನಾಥ ಗೊಂಡಬಾಳ, ಸ್ಥಳೀಯ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಮುಖಂಡರು, ಪತ್ರಕರ್ತರು, ಸಾಹಿತಿಗಳು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು..!!