ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಸಾವಿರಾರು ಜನ ಭಕ್ತ ಸಾಗರದ ಮಧ್ಯದಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಐತಿಹಾಸಿಕ ಕ್ಷೇತ್ರ ಕೋಟಿಲಿಂಗುಗಳ ಇತಿಹಾಸದ ಪುರದ ಶ್ರೀ ಸೋಮನಾಥೇಶ್ವರ ರಥೋತ್ಸವವು ಅದ್ಧೂರಿಯಾಗಿ ಜರುಗಿತು..!
ಪ್ರತಿ ವರ್ಷದಂತೆ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಜರುಗುವ ಈ ರಥೋತ್ಸವಕ್ಕೆ ತಹಸೀಲ್ದಾರ ಗುರುರಾಜ ಚಲುವಾದಿಯವರು ಚಾಲನೆ ನೀಡಿದರು. ಜಾತ್ರೆಯ ಜೊತೆಗೆ ಕೋಟಿ ಲಿಂಗುಗಳ ಇತಿಹಾಸ ಹೊಂದಿರುವ ಈ ಪುಣ್ಯ ಕ್ಷೇತ್ರದ ದರ್ಶನ ಪಡೆಯುವುದು ಭಾಗ್ಯವೇ ಸರಿ. ಜಿಲ್ಲೆ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ಕಂದಾಯ ನಿರೀಕ್ಷಕ ಶರಣಪ್ಪ ದಾಸರ ಸೇರಿದಂತೆ, ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಸಂಗನಾಳ, ಪುರ ಗ್ರಾಮಗಳ ಮುಖಂಡರು ರಥೋತ್ಸವಕ್ಕೆ ಸಾಕ್ಷಿಯಾದರು..!!