ಕೊಪ್ಪಳದಲ್ಲಿಲ್ಲ ಪಟೇಲರ ಗುರುತು

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲಾ ಉದಯಕ್ಕೆ ಕಾರಣಿಕರ್ತರಾಗಿರುವ ಮಹಾನ್ ಚೇತನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್ ಪಟೇಲರ ಹೆಸರಿನ ಕುರಿತಾಗಿ ಅಂತಹ ಹೇಳಿಕೊಳ್ಳುವಂತಹ ನೆನಪುಗಳು ಜಿಲ್ಲೆಯಲ್ಲಿ ಇಲ್ಲದಂತದಿರುವುದು ವಿಪರ್ಯಾಸದ ಸಂಗತಿ..!

ಸಾವಿರಾರು ಜನ ಹೋರಾಟಗಾರರ ಅವಿರತ ಪ್ರತಿಭಟನೆ, ರಸ್ತಾರೋಖ, ಉಪವಾಸ ಸತ್ಯಾಗ್ರಹ ಇತ್ಯಾದಿಗಳ ಫಲವಾಗಿ ಕೊಪ್ಪಳಕ್ಕೆ ಜಿಲ್ಲಾ ಕೇಂದ್ರದ ಸ್ಥಾನಮಾನ ದೊರಕಿತು. ಆದರೆ, ನೂತನ ಜಿಲ್ಲೆಯ ಜಾರಿಗೆ ಸಾಕಷ್ಟು ರಾಜಕೀಯ ಒತ್ತಡಗಳ ಮಧ್ಯದಲ್ಲಿಯೂ ಅಂದು ಹಸಿರು ನಿಶಾನೆ ತೋರಿಸಿದ ದಿಟ್ಟ ಮುಖ್ಯಮಂತ್ರಿ ಎಂತಲೂ ಖ್ಯಾತಿಯ ದಿವಂಗತ ಜೆ.ಹೆಚ್ ಪಟೇಲರ ಸ್ಮರಣೆಗಾಗಿ ಜಿಲ್ಲೆಯಲ್ಲಿ ಯಾವುದೇ ಪ್ರಮುಖ ಸ್ಥಳಗಳಿಗೆ ನಾಮಕರಣದಿಂದ ಹಿಡಿದು, ಅವರ ಪುತ್ಥಳಿ ಸ್ಥಾಪನೆ ಗೋಜಿಗೆ ಆಡಳಿತದಲ್ಲಿ ಭಾಗಿಯಾದವರು ಇಲ್ಲಿಯವರೆಗೆ ಯಾರೊಬ್ಬರು ಮುಂದೆ ಬಂದಿಲ್ಲ. ಜಿಲ್ಲಾ ಉದಯವಾದ ದಿನ ಪ್ರತಿ ವರ್ಷ ಅಗಷ್ಟ 24 ರಂದು ಮಾತ್ರ ಖಾಸಗಿಯವರು ಕೆಲ ಕಾರ್ಯಕ್ರಮಗಳನ್ನು ಏರ್ಪಡಿಸುವುದನ್ನು ಬಿಟ್ಟರೆ, (ಜಿಲ್ಲಾ ಪಂಚಾಯಿತಿ ಸಭಾಂಗಣಕ್ಕೆ ನಾಮಕರಣ ಬಿಟ್ಟರೆ) ಸರಕಾರದಿಂದ ಮಾತ್ರ ಯಾವುದೇ ಕಾರ್ಯಕ್ರಮಗಳ ಆಯೋಜನೆ ಕೂಡಾ ಇಲ್ಲದಿರುವುದು ಜಿಲ್ಲೆಯ ಜನರ ಪಾಲಿಗೆ ನೋವಿನ ಸಂಗತಿಯಾಗಿದೆ..!!

 

(ಮುಂದುವರೆಯುವುದು…)