ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ ಕೊಪ್ಪಳ ಜಿಲ್ಲೆಯ ವಿಶ್ವವಿದ್ಯಾಲಯ ಜಿಲ್ಲಾ ಕೇಂದ್ರ ಸ್ಥಾನದಲ್ಲಿಯೇ ಸ್ಥಾಪನೆಯಾಗಬೇಕು ಎಂಬ ಕೂಗು ಕೇಳಿ ಬರುತ್ತಿದೆ..!
ಎರಡು ಕೋಟಿ ರೂಪಾಯಿಗಳ ಅನುದಾನದಲ್ಲಿ ಕೂಡಲೇ ಆರಂಭಗೊಳ್ಳಲಿರುವ ಕೊಪ್ಪಳ ಜಿಲ್ಲೆಯ ‘ವಿಶ್ವವಿದ್ಯಾಲಯ’ ಕೊಪ್ಪಳ ‘ಜಿಲ್ಲಾ ಕೇಂದ್ರ’ ಸ್ಥಾನದಲ್ಲಿ ಸ್ಥಾಪನೆಯಾಗಬೇಕು. ಯಾರದೋ ಒತ್ತಡಕ್ಕೆ ಮಣಿದು, ಯಲಬುರ್ಗಾ, ಕುಷ್ಟಗಿ, ಗಂಗಾವತಿ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಸ್ಥಾಪನೆಗೆ ಮುಂದಾಗಬಾರದು. ಕಲಿಕಾರ್ಥಿಗಳ ಹಿತ ದೃಷ್ಟಿಯಿಂದ ಹಾಗೂ ಸರಕಾರದ ನಿರ್ದೇಶನಗಳಂತೆ ಜಿಲ್ಲಾ ಕೇಂದ್ರದಲ್ಲಿಯೇ ‘ವಿವಿ’ ಸ್ಥಾಪನೆಯಾಗಬೇಕು. ಯಲಬುರ್ಗಾ ಪಟ್ಟಣದಲ್ಲಿ ಈಗಾಗಲೇ ಸ್ಥಾಪನೆಯಾಗಿರುವ ವಿವಿಯ ಅಧ್ಯಯನ ಕೇಂದ್ರಗಳಲ್ಲಿ ನೂತನ ವಿವಿ ಆರಂಭಿಸಬಾರದು ಎಂಬ ಮಾತುಗಳು ಕೇಳಿಬರುತ್ತಿವೆ..!!
### ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿಯೇ ನೂತನ ವಿವಿ ಆರಂಭವಾಗಲಿದೆ. ಸಚಿವ ಹಾಲಪ್ಪ ಆಚಾರ ಅವರ ಅಭಿಪ್ರಾಯ ಕೂಡಾ ಕೊಪ್ಪಳದಲ್ಲಿಯೇ ಸ್ಥಾಪನೆಗೆ ಇಂಗಿತ ವ್ಯಕ್ತಪಡಿಸಿದರು. ವಿವಿ ಸ್ಥಾಪನೆಗೆ ಎಲ್ಲರ ಸಹಕಾರ ಅತ್ಯಗತ್ಯ.
# # ಡಾ.ಬಸವರಾಜ ಪೂಜಾರ,
ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಸಿಂಡಿಕೇಟ್ ಸದಸ್ಯರು, ಕೊಪ್ಪಳ.
————————————————————
ಲೋಗೋ ಪರಿಕಲ್ಪನೆ : Shivu kum(b)ar