ಪಿ ಎಸ್ ಐ ನೇಮಕಾತಿ ಹಗರಣದ ಸಪ್ಪಳ ಕೊಪ್ಪಳದಲ್ಲಿನ್ನೂ ಬಯಲಾಗಬೇಕಾಗಿದೆ..!?

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಜ್ಯದಲ್ಲಿ ಭಾರಿ ಸುದ್ದಿ ಮಾಡಿದ್ದ ಪಿ ಎಸ್ ಐ ನೇಮಕಾತಿ ಹಗರಣದ ನಂಟು ಕೊಪ್ಪಳ ಜಿಲ್ಲೆವರೆಗೂ ವಿಸ್ತರಿಸಿದ ಬಹು ದೊಡ್ಡ ಜಾಲವು ಸೂಕ್ತ ತನಿಖೆಯಿಂದ ಇನ್ನಷ್ಟು ಬಯಲಾಗಬೇಕಾಗಿದೆ..!?

ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ ದಡೇಸ್ಗೂರು ಅವರು ಪಿ ಎಸ್ ಐ ಆಕಾಂಕ್ಷಿಯೊಬ್ಬರಿಂದ ಹಣ ಪಡೆದಿರುವುದು ಆಡಿಯೋ ಸಂಭಾಷಣೆಯಿಂದ ಸ್ಪಷ್ಟವಾಗಿದೆ. ಆದರೆ, ಜಿಲ್ಲೆಯ ಆಡಳಿತಾರೂಢ ಶಾಸಕರು ಭಾಗಿಯಾಗಿರುವ ಈ ಪ್ರಕರಣದ ಹಿಂದೆ ಬಹು ದೊಡ್ಡ ಜಾಲ ಇರುವ ಶಂಕೆ ಜಿಲ್ಲೆಯಲ್ಲಿವ್ಯಕ್ತವಾಗುತ್ತಿದೆ. ಜಿಲ್ಲೆಯ ಶಾಸಕರು ಸೇರಿದಂತೆ ಭಾಗಿಯಾಗಿರುವ ಎನ್ನಲಾದ ವ್ಯಕ್ತಿಗಳ ನಂಟು ಪ್ರಕರಣದ ಯಾವ ಪ್ರಮುಖ ಕಿಂಗ್ ಪಿನ್ ಜೊತೆಗಿದೆ..? ಅಲ್ಲದೆ, ರಾಜ್ಯಮಟ್ಟದ ಯಾವ ರಾಜಕಾರಣಿಗಳ ಜೊತೆಗಿನ ಸಂಪರ್ಕವಿದೆ..? ಇಲ್ಲಿಯವರೆಗೂ ನಡೆದಿರುವ ತನಿಖೆಯಲ್ಲಿ ಏತಕ್ಕೆ ಕೊಪ್ಪಳದವರ ನಂಟು ಯಾವ ಕಾರಣಕ್ಕಾಗಿ ಬೆಳಕಿಗೆ ಬಾರಲಿಲ್ಲ..? ಹಾಗಿದ್ದರೆ… ಪ್ರಕರಣದಲ್ಲಿ ಭಾಗಿಯಾದ ಕೊಪ್ಪಳದವರ ನಂಟು ಇಡೀ ಪ್ರಕರಣದಲ್ಲಿಯೇ ವಿಭಿನ್ನತೆ ಪಡೆದಿದೆ ಎಂಬುದು ಮಾತ್ರ ಸ್ಪಷ್ಟವಾಗಿರುತ್ತದೆ. ಪ್ರಕರಣದ ತನಿಖೆ ಇನ್ನಷ್ಟು ಚುರುಕಾದಾಗ ಮಾತ್ರ ಕೊಪ್ಪಳ ಜಿಲ್ಲೆಯಲ್ಲಿ ಹಣದ ಹೊಳೆಯ ‘ಸಪ್ಪಳದ’ ಜೊತೆಗೆ ಹಗರಣದಲ್ಲಿ ಭಾಗಿಯಾಗಿರುವ ಬಹು ದೊಡ್ಡ ‘ಮಹಾಶಯರ’ ಹೆಸರುಗಳು ಸ್ಪಷ್ಟವಾಗಿ ಹೊರಬರಲು ಸಾಧ್ಯ..!?

(ಮುಂದುವರೆಯುವುದು…)