ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಸಮೀಪದ ಕಾಟಾಪೂರು ಗ್ರಾಮದ ರೈತ ಸಿಡಿಲಿಗೆ ಬಲಿಯಾಗಿರುವ ಘಟನೆ ಜರುಗಿದೆ..!
ಸಣ್ಣನೀಲಪ್ಪ ಹಾದಿಮನಿ (64) ಸಿಡಿಲಿಗೆ ಬಲಿಯಾಗಿರುವ ನತದೃಷ್ಟ ರೈತ. ಸಾಯಂಕಾಲ ಸುಮಾರಿಗೆ ಆರಂಭವಾದ ಮಳೆಯ ಜೊತೆಗೆ ಬಡಿದ ಸಿಡಿಲಿಗೆ ರೈತ ಮೃತಪಟ್ಟಿರುವುದು ಸ್ಪಷ್ಟವಾಗಿದೆ. ಘಟನೆಯು ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ದಮ್ಮೂರು ಗ್ರಾಮದ ಸೀಮಾದಲ್ಲಿಜರುಗಿದೆ. ಬಾಗಲಕೋಟೆ ಜಿಲ್ಲೆಯ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..!!