ಕನ್ನಡದ ಮೇಲೆ ಅಭಿಮಾನ ಕಡಿಮೆಯಾಗುತ್ತಿದೆ : ಬಯ್ಯಾಪೂರು

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕನ್ನಡ ಭಾಷೆ ಮೇಲೆ ಅಭಿಮಾನ ಕಡಿಮೆಯಾಗುತ್ತಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅವರು ವಿಷಾದ ವ್ಯಕ್ತಪಡಿಸಿದರು..!

ಅವರು ಕನ್ನಡ ಸಾಹಿತ್ಯ ಪರಿಷತ್ 2022-2026 ನೇ ಸಾಲಿನ ಹೋಬಳಿ ಘಟಕದ ಪದಾಧಿಕಾರಿಗಳ ಸೇವಾ ಸ್ವೀಕಾರ ಹಾಗೂ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ತಾಯಿ ಭಾಷೆಯನ್ನ ಎಂದಿಗೂ ಮರೆಯಬಾರದು. ಕನ್ನಡ ಭಾಷೆಯ ಪ್ರೀತಿಯ ಜೊತೆಗೆ ಇನ್ನಿತರ ಭಾಷೆಗಳನ್ನು ಅವಲಂಬಿಸಬೇಕಾಗಿದೆ. ಕನ್ನಡ ಭಾಷೆಯ ಉಳಿಯುವಿಗಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ಕಸಾಪ ಘಟಕಗಳು ಹೆಚ್ಚು ಹೆಚ್ಚು ಕನ್ನಡಪರ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿದೆ ಎಂದು ಶಾಸಕ ಬಯ್ಯಾಪೂರು ಅವರು ಅಭಿಪ್ರಾಯವ್ಯಕ್ತಪಡಿಸಿದರು.

ನಿವೃತ್ತ ಉಪನ್ಯಾಸಕ ಕೆ.ಬಿ ತಳವಾರ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ ಬಗ್ಗೆ ನಾವು ಶಾಂತವಾಗಿದ್ದೀವಿ. ನಮ್ಮ ಪೂರ್ವಜರು ಕನ್ನಡ ಭಾಷೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದಾರೆ. ಆದರೆ, ನಾವು ನಮ್ಮ ಭಾಷೆಯ ಬಗ್ಗೆ ಗೌರವ ತಾಳುವುದರ ಜೊತೆಗೆ ಕನ್ನಡ ಭಾಷೆ ರಕ್ಷಣೆಗೆ ಕಂಕಣ ಬದ್ಧರಾಗಬೇಕಾಗಿದೆ. ಜಲ ವಿವಾದ ಬಗ್ಗೆ ಸರಕಾರಗಳು ಗಮನ ಹರಿಸಬೇಕಾಗಿದೆ ಎಂದರು.

ಶಿಕ್ಷಕ ಕಿಶನರಾವ್ ಕುಲಕರ್ಣಿ ಮಾತನಾಡಿ, ವಿಶ್ವದ ತಾಯಿ ಭಾಷೆಯಾಗಿ ಕನ್ನಡವು ಸ್ಥಾನ ಪಡೆದಿತ್ತು. ಕನ್ನಡವು ಶ್ರೀಮಂತ ಭಾಷೆಯಾಗಿ 2500 ವರ್ಷಗಳ ಹಿಂದೆಯೇ ಈ ನಾಡಿನಲ್ಲಿ ಸಿರಿ ಸಂಪತ್ತಾಗಿ ಕನ್ನಡ ಭಾಷೆಯಾಗಿ ಮೆರೆದಿತ್ತು. ಇಂಗ್ಲಿಷ್ ಎಂಬ ಭೂತ ಭಾಷೆಯ ಮುಂದೆ ಕನ್ನಡ ಭಾಷೆಯು ಸೊರಗುತ್ತಿದೆ ಎಂದು ವಿಷಾಧವ್ಯಕ್ತಪಡಿಸಿದರು. ಕನ್ನಡ ಭಾಷೆ ಅನ್ನದ ಭಾಷೆಯಾಗಿ ಹೊರಹೊಮ್ಮಬೇಕಾಗಿದೆ. ಲಿಪಿಗಳ ರಾಣಿ ಎಂದು ಕನ್ನಡ ಭಾಷೆಯನ್ನು ಕರೆಯಲಾಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಲೆಂಕಪ್ಪ ಸಾಂತಗೇರಿ, ಕಸಾಪ ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ ತಳವಾರ, ನಿವೃತ್ತ ಪ್ರಾಚಾರ್ಯ ಕೆ.ಬಿ ತಳವಾರ, ನಿವೃತ್ತ ಶಿಕ್ಷಕ ಕೆ.ಆರ್ ಕುಲಕರ್ಣಿ, ಭೀಮಣ್ಣ ತಳವಾರ, ಶಿಕ್ಷಕ ಕಿಶನ್ ರಾವ್ ಕುಲಕರ್ಣಿ, ಕೇಂದ್ರ ಪರಿಷತ್ ಸಂಘ ಸಂಸ್ಥೆಗಳ ಪ್ರತಿನಿಧಿ ನಬೀಸಾಬ್ ಕುಷ್ಟಗಿ, ವಿದ್ಯಾ ಕಂಪಾಪೂರಮಠ, ಮಲ್ಲಿಕಾರ್ಜುನ ಶಾಡಲಗೇರಿ, ಗುರುನಾಥ ಪತ್ತಾರ, ನೂತನ ಹೋಬಳಿ ಘಟಕದ ಅಧ್ಯಕ್ಷ ರವೀಂದ್ರ ಕಾಟವಾ, ಚಂದಪ್ಪ ಹೆಬ್ಬಲಿ, ಮಲ್ಲವ್ವ ಭಜಂತ್ರಿ, ದ್ರಾಕ್ಷಾಯಿಣಿ ಹಿರೇಮಠ, ಮಲ್ಲಯ್ಯ ಕೋಮಾರಿ, ಶರಣಪ್ಪ ಲೈನದ್, ಸಂತೋಷ ಕಂಚೇರ, ಲೆಂಕಪ್ಪ ವಾಲಿಕಾರ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕ ಯರ್ರಿಸ್ವಾಮಿ, ಗುರುರಾಜ ಹಡಪದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು..!!