ಕಸಾಪ ಹನುಮನಾಳ ಹೋಬಳಿ ಘಟಕ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸೇವಾ ಸ್ವೀಕಾರ ಹಾಗೂ 2022-23ನೇ ಸಾಲಿನ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಿನಾಂಕ 31-08-2022 ರಂದು ಬುಧವಾರ ಹಮ್ಮಿಕೊಳ್ಳಲಾಗಿದೆ.!

ಹನುಮನಾಳ ಗ್ರಾಮದ ಶ್ರೀಬಾಲಗಂಗಾಧರಸ್ವಾಮಿ ಸಂಗೀತ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹೋಬಳಿ ಘಟಕದ ನೂತನ ಗೌರವಾಧ್ಯಕ್ಷ ಬಾಳಪ್ಪ ವತ್ತಿ ಮಿಟ್ಟಲಕೋಡ, ಅಧ್ಯಕ್ಷ

ರವೀಂದ್ರ ಹೆಚ್. ಕಾಟವಾ, ಗೌರವ ಕಾರ್ಯದರ್ಶಿ ಗೊಳನಗೌಡ ಪಾಟೀಲ, ಕಾರ್ಯದರ್ಶಿ ಗುರುರಾಜ ಹಡಪದ, ಸಂಘಟನಾ ಕಾರ್ಯದರ್ಶಿ ಬಸವರಾಜ ದಾಸರ, ಖಜಾಂಚಿ ಚಂದಪ್ಪ ಹೆಜ್ಜೆ, ಪರಿಶಿಷ್ಟ ಜಾತಿ ಪ.ಪಂಗಡ ಪ್ರತಿನಿಧಿಗಳಾದ ಭೀಮಣ್ಣ ತಳವಾರ, ಶ್ರೀಮತಿ ದಾಕ್ಷಾಯಿಣಿ ಹಿರೇಮಠ, ಶ್ರೀಮತಿ ಸಾವಿತ್ರಿ ಲಿಂಗದಳ್ಳಿ, ಶ್ರೀಮತಿ ಗೀತಾ ಸ. ಕಾಗಿಯವರ,
ಮಾಧ್ಯಮ ಪ್ರತಿನಿಧಿ ಶರಣಪ್ಪ ಚಕ್ರಸಾಲಿ, ಶಿಕ್ಷಣ ಕ್ಷೇತ್ರ ಪ್ರತಿನಿಧಿ ಯರ್ರಿಸ್ವಾಮಿ ಬಿ., ಹನಮಂತ ಮಾಲಗಿತ್ತಿ, ಕಲಾವಿದರ ಪ್ರತಿನಿಧಿ ಗುರುನಾಥ ಪತ್ತಾರ, ಸಂಘ ಸಂಸ್ಥೆಗಳ ಪ್ರತಿನಿಧಿ ಚಂದ್ರಶೇಖರ ಉಪ್ಪಿನ, ವೈದ್ಯಕೀಯ ಪ್ರತಿನಿಧಿ ಸಂತೋಷ ಕುದರಿ ಇವರುಗಳು ಸೇವಾ ಸ್ವೀಕಾರ ಮಾಡಲಿದ್ದಾರೆ.

ಬಾದಾಮಿ ತಾಲೂಕಿನ ಬೇಲೂರಿನ ನಿವೃತ್ತ ಶಿಕ್ಷಕ ಮುತ್ತಯ್ಯ ಘಂಟಿಮಠ ದಿವ್ಯ ಸಾನಿಧ್ಯವಹಿಸುವ ಕಾರ್ಯಕ್ರಮವನ್ನು ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರು ಉದ್ಘಾಟಿಸಿದ್ದಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸಪಾಟೀಲ ಅಧ್ಯಕ್ಷತೆವಹಿಸುವರು. ಮಾಜಿ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಹಾಗೂ ಕಸಾಪ ಕೇಂದ್ರ ಸಂಘ ಸಂಸ್ಥೆಗಳ ಪ್ರತಿನಿಧಿ ನಬೀಸಾಬ್ ಕುಷ್ಟಗಿ ಘನ ಉಪಸ್ಥಿತಿಯಲ್ಲಿ ಕಸಾಪ ತಾಲೂಕಾಧ್ಯಕ್ಷ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಟಾರ್ಪಣೆ ಸಲ್ಲಿಸುವರು. ನಿಕಟಪೂರ್ವ ಅಧ್ಯಕ್ಷ ಭೀಮಣ್ಣ ತಳವಾರ ಸೇವಾ ಹಸ್ತಾಂತರಲ್ಲಿದ್ದಾರೆ. ನೂತನ ಹೋಬಳಿ ಘಟಕದ ಅಧ್ಯಕ್ಷ ರವೀಂದ್ರ ಹೆಚ್ ಕಾಟವಾ ಸೇವಾ ಸ್ವೀಕರಿಸಲಿದ್ದಾರೆ. ನಿವೃತ್ತ ಪ್ರಾಚಾರ್ಯ ಕೆ.ಬಿ.ತಳವಾರ ಆಶಯ ನುಡಿ ನುಡಿಯಲಿದ್ದಾರೆ. ನಾಡು ನುಡಿ ಜಾಗೃತಿಯಲ್ಲಿ ಕಸಾಪ ಪಾತ್ರ ಎಂಬ ವಿಷಯದ ಮೇಲೆ ಉಪನ್ಯಾಸ ಮಾಡಲಿದ್ದಾರೆ. ಹನುಮನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತವ್ವ ಲೆಂಕಪ್ಪ ಸಾಂತಗೇರಿ ಸೇರಿದಂತೆ ಉಪಾಧ್ಯಕ್ಷರು, ಸರ್ವ ಸದಸ್ಯರು, ಮುಖಂಡರು ಸಾಹಿತಿಗಳು ಪರಿಷತ್ ಅಜೀವ ಸದಸ್ಯರು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಗೌರವ ಸಲಹೆಗಾರರು ಹಾಗೂ ಹೋಬಳಿ ಘಟಕಗಳ ಅಧ್ಯಕ್ಷರು, ವಿವಿಧ ಕನ್ನಡ ಪರ ಸಂಘಟನೆಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರು, ಗ್ರಾಮದ ಮುಖಂಡರುಗಳು ಉಪಸ್ಥಿತರಿರಲಿದ್ದಾರೆ ಎಂದು ಕಸಾಪ ಹೋಬಳಿ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.!!