ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಹತ್ತಿ ಪ್ಲಾಟಿಗೆ ಕ್ರಿಮಿನಾಶಕ ಸಿಂಪಡಿಸಿ ಸಂಜೆ ಮನೆಗೆ ಹಿಂತಿರುಗಿದ ಬಳಿಕ ಅಸ್ತವ್ಯಸ್ತಗೊಂಡ ರೈತನೊಬ್ಬ ಸಾವಿಗೀಡಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.!
ರೈತ ನಾಗಪ್ಪ ತಂದಿ ಯಂಕಪ್ಪ ತೋಪಲಕಟ್ಟಿ (46) ಸಾವಿಗೀಡಾದ ದರ್ದೈವಿ. ಗುಡಿ ಕಲಕೇರಿ ಸೀಮಾ ವ್ಯಾಪ್ತಿಯ ಹೊಲವೊಂದಕ್ಕೆ ದಿನಾಂಕ 29-08-2022 ರಂದು ಮದ್ಯಾಹ್ನ ವೇಳೆ ದಂಪತಿಗಳಿಬ್ಬರು ಹತ್ತಿ (ಪ್ಲಾಟ್) ಬೆಳೆಗೆ ಫೋಸಕಿಲ್ ಎಂಬ ಹೆಸರಿನ ಕ್ರಿಮಿನಾಷಕ ಸಿಂಪಡಿಸಿದ್ದಾರೆ. ಸಂಜೆ ಮನೆಗೆ ಹಿಂತಿರುಗಿ, ಊಟ ಮಾಡಿದ್ದಾನೆ. ಬಳಿಕ ರೈತನ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು ಅಸ್ವಸ್ಥನಾಗಿದ್ದಾನೆ. ಪ್ರಾಥಮಿಕ ಚಿಕಿತ್ಸೆಗಾಗಿ ದೋಟಿಹಾಳ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ
ಖಾಸಗಿ ವಾಹನದ ಮೂಲಕ ತೆರಳುವ ಮಾರ್ಗದ ಮಧ್ಯೆದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಮೃತನ ಪತ್ನಿ ದೇವಮ್ಮ ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..!!