ಆರ್.ಡಿ.ಸಿ.ಸಿ ಯಿಂದ ಕೆ.ಡಿ.ಸಿ.ಸಿ ಬದಲಾವಣೆ ಯಾವಾಗ..!?

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲಾ ಉದಯವಾಗಿ 25 ವರ್ಷಗಳು ಕಳೆದರೂ ಇನ್ನೂವರೆಗೂ ಆರ್.ಡಿ.ಸಿ.ಸಿ ಬ್ಯಾಂಕ್ ನಿಂದ ಪ್ರತ್ಯೇಕವಾಗಿ ಕೊಪ್ಪಳ ಜಿಲ್ಲೆಯಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ಆಗಿ ಸ್ಥಾಪನೆಯಾಗಿರುವುದಿಲ್ಲ..!?

ಕೊಪ್ಪಳ ಜಿಲ್ಲೆಯಲ್ಲಿರುವ ಆರ್.ಡಿ.ಸಿ.ಸಿ ಬ್ಯಾಂಕ್ ನ ಶಾಖೆಗಳನ್ನು ಗಮನಿಸಿದರೇ.. ಕೊಪ್ಪಳ ಜಿಲ್ಲೆ ಅಖಂಡ ರಾಯಚೂರು ಜಿಲ್ಲೆಯಿಂದ ಇನ್ನೂ ಪ್ರತ್ತೇಕವಾಗಿಲ್ಲ ಎಂಬ ಭಾವನೆ ಮೂಡುತ್ತದೆ. ಸಾರ್ವಜನಿಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಬ್ಯಾಂಕ್ ಸಿಬ್ಬಂದಿ ವರ್ಗವು ಕೇಂದ್ರ ಕಚೇರಿ ಹೊಂದಿರುವ ದೂರದ ರಾಯಚೂರು ನಗರಕ್ಕೆ ಹೋಗಿ, ಬರುವ ಅಲೆದಾಟದಿಂದ ಬೇಸತ್ತು ಹೋಗಿದ್ದಾರೆ. ರಾಯಚೂರಿನಿಂದ ಕೊಪ್ಪಳ ಜಿಲ್ಲೆಯ ಹೆಸರಿನಲ್ಲಿ ಏತಕ್ಕೆ ಬ್ಯಾಂಕ್ ಪ್ರತ್ಯೇಕಗೊಳಿಸಿಲ್ಲ. ಯಾವ ಕಾರಣಕ್ಕಾಗಿ ಬ್ಯಾಂಕ್ ಪ್ರತ್ಯೇಕವಾಗಿಲ್ಲ ಎಂಬ ಇತ್ಯಾದಿ ಪ್ರಶ್ನೆಗಳು ಸಾರ್ವಜನಿಕರನ್ನ ಕಾಡುತ್ತಿವೆ. ಸರಕಾರ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕಗೊಳಿಸಬೇಕಾಗಿರುವ ಮಹತ್ತರ ಕಾರ್ಯ ಬಾಕಿ ಇದೆ..!?

 

(ಮುಂದುವರೆಯುವುದು…)