ಕೂಡಲ ಸಂಗಮ ಅಭಿವೃದ್ಧಿ ಹರಿಕಾರ ಜೆ.ಹೆಚ್ ಪಟೇಲರು..!

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಬಾಗಲಕೋಟೆ (ಕುಷ್ಟಗಿ) : ರಾಜ್ಯದ 20ನೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಜಯದೇವಪ್ಪ ಹಾಲಪ್ಪ ಪಟೇಲ್ (ಜೆ.ಹೆಚ್.ಪಟೇಲ್)ರು ಮಾಡಿದ ಅಭಿವೃದ್ಧಿ ಕಾರ್ಯ ಭ್ರಷ್ಟಾಚಾರವಿಲ್ಲದ ಆಡಳಿತ ನಾಡಿನ ಜನತೆಯಲ್ಲಿ ಅವರ ಆಡಳಿತದ ಕಾರ್ಯವೈಖರಿ ನೆನಪು ಇಂದಿಗೂ ಚಿರಸ್ತಾಯಿ.!

ಇಂದಿನ ಕಲ್ಯಾಣ ಕರ್ನಾಟಕ ಅಂದು ಹೈದರಾಬಾದ್ ಕರ್ನಾಟಕ. ಈ ಭಾಗ ಹೊರತುಪಡಿಸಿ ರಾಜ್ಯದಲ್ಲಿ ಪ್ರವಾಸಿ ತಾಣಗಳು ಆಗಲೇ ಹೆಸರುವಾಸಿಯಾಗಿ ಅಭಿವೃದ್ಧಿ ಕಂಡಿದ್ದವು. ಆದರೆ, ಜಗಜ್ಯೋತಿ ಬಸವೇಶ್ವರ ಐಕ್ಯ ಸ್ಥಳ ಮಾತ್ರ ಬಂದಂತಹ ಸರ್ಕಾರಗಳು ಮರೆತು ಕುಳಿತಂತ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ಜೆ.ಹೆಚ್.ಪಟೇಲರು, ಕೂಡಲ ಸಂಗಮ ಅಭಿವೃದ್ಧಿಗೆ ಮುಂದಾದರು.
ಸಂಗಮದ ಸಮಗ್ರ ಅಭಿವೃದ್ಧಿಗೆ ನೂರು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿ ಅದರ ನಿರ್ವಹಣೆಗೆ ಅಂದಿನ ನಿಷ್ಠಾವಂತ ಐಎಎಸ್ ಅಧಿಕಾರಿ ಜಾಮದಾರ ಅವರನ್ನು ನೇಮಿಸಿದರು. ಕನ್ನಡ ನಾಡಿನ ಹೆಸರನ್ನು ವಿಶ್ವಮಟ್ಟದಲ್ಲಿ ಜೀವಂತವಾಗಿಸಿದ 12 ನೇ ಶತಮಾನದ ಬಸವ ಕ್ರಾಂತಿಯ ನೆನಪಿಗಾಗಿ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸಮಗ್ರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಿ ಮತ್ತೊಮ್ಮೆ ಇತಿಹಾಸ ಮರುಕಳಿಸುವಂತೆ ಮಾಡಿದರು.
ಇಡೀ ದೇಶವೇ ಕೂಡಲ ಸಂಗಮದತ್ತ ಮುಖ ಮಾಡುವಂತೆ ಮಾಡಿದ ಮಾಜಿ ಮುಖ್ಯಮಂತ್ರಿ ದಿವಂಗತ ಜಯದೇವಪ್ಪ ಹಾಲಪ್ಪ ಪಟೇಲ್ (ಜೆ.ಹೆಚ್.ಪಟೇಲ್)ರಿಗೊಂದು ನಮ್ಮದೊಂದು ಸಲಾಂ.!!