ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಆಹಾರ ಅರಸಿ ಬಂದು ಆಯಾತಪ್ಪಿ ತೆರೆದ ಬಾವಿಯೊಳಗೆ ಬಿದ್ದಿದ್ದ ಕತ್ತೆಕಿರುಬ (ಹೈನಾ) ಪ್ರಾಣಿವೊಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಭಾನುವಾರ ಸಾಯಂಕಾಲ ಜರುಗಿದೆ..!
ಕುಷ್ಟಗಿ ತಾಲೂಕಿನ ಹನುಮಸಾಗರ ಸಮೀಪದ ಕಬ್ಬರಗಿ ಗ್ರಾಮದ ದಮ್ಮೂರು ರಸ್ತೆ ಬಳಿಯ ಹೊಲವೊಂದರ ಬಾವಿಯ ಬಳಿ ಮಾಂಸಹಾರ ಹರಸಿ ಬಂದಿದ್ದ ಕತ್ತೆಕಿರುಬ (ಹೈನಾ) ಪ್ರಾಣಿವೊಂದು ಆಕಸ್ಮಾತಾಗಿ ಆಯಾತಪ್ಪಿ ಬಾವಿಯೊಳಗೆ ಬಿದ್ದಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಹಾಗೂ ಅಗ್ನಿಶಾಮಕ ಠಾಣಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ನಂತರ ಗದಗ ಪ್ರಾಣಿ ಸಂಗ್ರಹಾಲಯದ ಹಿರಿಯ ಅಧಿಕಾರಿಗಳನ್ನು ಕರೆಯಿಸಿ ಬಾವಿಯೊಳಗಿದ್ದ ಕತ್ತೆಕಿರುಬ (ಹೈನಾ) ಪ್ರಾಣಿಗೆ ಅರವಳಿಕೆ ಮದ್ದು ನೀಡಿದ್ದಾರೆ. ಜ್ಞಾನ ತಪ್ಪಿದ ಬಳಿಕ ಪ್ರಾಣಿಯನ್ನು ಮೇಲಕ್ಕೆತ್ತುವ ಮೂಲಕ ಪ್ರಾಣ ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬಳಿಕ ಪ್ರಾಣಿಯನ್ನು ಗದಗ ಪ್ರಾಣಿ ಸಂಗ್ರಹಾಲಯಕ್ಕೆ ಒಪ್ಪಿಸಲಾಗಿತು.
ಗದಗ ಪ್ರಾಣಿ ಸಂಗ್ರಹಾಲಯದ ವಲಯ ಸಂರಕ್ಷಣಾಧಿಕಾರಿ ಸೇರಿದಂತೆ ಕುಷ್ಟಗಿ ಅರಣ್ಯಾಧಿಕಾರಿಗಳು, ಕುಷ್ಟಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ..!!