ಖೋ-ಖೋ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಸರಕಾರಿ ಪದವಿ ಪೂರ್ವ ಕಾಲೇಜಿನ ಬಾಲಕರ ಖೋ-ಖೋ ತಂಡವು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ..!

ಕುಷ್ಟಗಿ ತಾಲೂಕಾ ಕ್ರೀಡಾಂಗಣದಲ್ಲಿ ಜರುಗಿದ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಪೈನಲ್ ಹಂತ ತಲುಪಿದ ಹನುಮನಾಳ ಬಾಲಕರ ಖೋ-ಖೋ ತಂಡವು ಹನುಮಸಾಗರ ತಂಡವನ್ನು ಮಣಿಸುವ ಮೂಲಕ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತು.

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಖೋ-ಖೋ ತಂಡಕ್ಕೆ ಕಾಲೇಜ್ ಉಸ್ತುವಾರಿ ಸಮಿತಿ ಉಪಾಧ್ಯಕ್ಷ ಬಸವರಾಜ ನೀರಾವರಿ ಸೇರಿದಂತೆ ಪ್ರಾಚಾರ್ಯ ಶ್ರೀನಿವಾಸ ಗೌಡರ, ಉಪನ್ಯಾಸಕರಾದ ಸುಭಾಸ ಗೌಡರ, ಶರಣಪ್ಪ ಪೂಜಾರ, ಉಮಾದೇವಿ, ಸರಸ್ವತಿ ಅಂಗಡಿ, ಸದಸ್ಯರಾದ ಪರಸನಗೌಡ ಗೌಡ್ರ, ಬಸವರಾಜ ತುಂಬದ, ನಾರಾಯಣ ಕಂಬಾರ, ಬಸಮ್ಮ ಕುರುಮನಾಳ, ರಾಜೇಶ್ವರಿ ಕಂಠಿ ಸೇರಿದಂತೆ ಹನುಮನಾಳದ ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ..!!