ಕಲಿಕಾ ಚೇತರಿಕೆ ಪರಿಣಾಮಕಾರಿಯಾಗಲಿ : ಶ್ಯಾಮಸುಂದರ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಒಂದರಿಂದ ಒಂಬತ್ತನೇ ತರಗತಿವರೆಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ತರಗತಿ ಪ್ರಕ್ರಿಯೆಗಳಲ್ಲಿ ಅರ್ಥಪೂರ್ಣ ಅನುಷ್ಠಾನಗೊಳಿಸುವಲ್ಲಿ ಮೇಲುಸ್ತುವಾರಿ ಅಧಿಕಾರಿಗಳು ಮತ್ತು ಶಾಲಾ ಮುಖ್ಯಗುರುಗಳು ತೊಡಗಿಸಿಕೊಳ್ಳಬೇಕೆಂದು ಮುನಿರಾಬಾದ್ ಡಯಟ್ ನ ಪ್ರಾಚಾರ್ಯ ಎ.ಶ್ಯಾಮಸುಂದರ ಅವರು ಕರೆ ನೀಡಿದರು..!

ಜಿಲ್ಲೆಯ ಕುಷ್ಟಗಿ ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಬ್ಲಾಕ್ ಹಂತದ ಸಿ.ಆರ್.ಪಿ ಬಿ.ಆರ್.ಪಿ, ಇಸಿಓ ಹಾಗೂ ಬಿ.ಐ.ಇ.ಆರ್. ಟಿ ಅವರುಗಳಿಗೆ ಶಿಕ್ಷಣ ಇಲಾಖೆ ಕಾರ್ಯಕ್ರಮಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಎನ್.ಇ.ಪಿ ಕುರಿತು ಜಾಗೃತಿ, ಶಿಕ್ಷಕ ಪರ್ವ ಕಾರ್ಯಕ್ರಮ, ಅಟಲ್ ಟಿಂಕರಿಂಗ್ ಲ್ಯಾಬ್ ನಿರ್ವಹಣೆ, ಟಾಲ್ಪ್ ಶಾಲೆಗಳ ಕಾರ್ಯನಿರ್ವಣೆ, ಸ್ಮಾರ್ಟ ಕ್ಲಾಸ್, ಇನ್ಸಪೈಯರ್ ಅವಾರ್ಡ, ಎನ್.ಎಮ್.ಎಮ್.ಎಸ್ ಮತ್ತು ಎನ್.ಟಿ.ಎಸ್.ಸಿ ನಿಷ್ಠಾ ಯರಬೇತಿ ಮಾಹಿತಿ ಶಾಲಾ ಸಿದ್ಧಿ ಮಾಹಿತಿ ಆಂಗ್ಲ ಮಾಧ್ಯಮಗಳ ಶಾಲೆಗಳ ನಿರ್ವಹಣೆ, ಎಸ್.ಡಿ.ಎಂ.ಸಿ ರಚನೆ ಹಾಗೂ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಯ ವಿವಿಧ ಕಾರ್ಯತಂತ್ರಗಳ ಬಳಕೆ ಕುರಿತು ಮಾರ್ಗದರ್ಶನದ ಜೊತೆಗೆ ನಿರ್ದೇಶನ ನೀಡಿದರು. ಕುಷ್ಟಗಿ ಬಿಇಓ ಸುರೇಂದ್ರ ಕಾಂಬಳೆ ಮಾತನಾಡಿ, ಪ್ರಗತಿ ಪರಿಶೀಲನೆ ಸಭೆಗಳು ಶೈಕ್ಷಣಿಕ ಗುಣಮಟ್ಟ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಜಗದೀಶ, ಡಯಟ್ ಹಿರಿಯ ಉಪನ್ಯಾಸಕರಾದ ಸುನಂದಮ್ಮ, ಕೃಷ್ಣಾ, ನಿರ್ಮಲಾ, ಎಂ.ಬಿ.ಅರಳಿ, ರಾಜೇಂದ್ರ ಬೆಳ್ಳಿ, ರೇಖಾ, ಕಲೀಂ ಶೇಖ್, ಶೇಖರ್, ಕವಿತಾ ದಿಗ್ಗಾವಿ, ಇಸಿಓ ದಾವಲಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಬಿ.ಆರ್.ಪಿ ಜೀವನಸಾಬ್ ಬಿನ್ನಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು..!!