ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಪ್ರಸಂಗ ಜರುಗಿತು..!
ಅನಾರೋಗ್ಯಕ್ಕೊಳಗಾದ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾದ ಸಿಎಂ ಬೊಮ್ಮಾಯಿ ಅವರು ಆರೋಗ್ಯದ ಕುರಿತು ಚರ್ಚಿಸಿದರು. ಸಚಿವರಾದ ಶಿವಣ್ಣ, ಆರ್.ಅಶೋಕ, ಬೈರತಿ ಬಸವರಾಜ, ಮಾಧುಸ್ವಾಮಿ ಸೇರಿದಂತೆ ಇನ್ನಿತರ ಸಚಿವರು, ಶಾಸಕರು, ಮುಖಂಡರು ಜೊತೆಗಿದ್ದರು. ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ದೇವೇಗೌಡರ ನಿವಾಸಕ್ಕೆ ಭೇಟಿಯಾಗಿ ಆರೋಗ್ಯ ಕ್ಷೇಮ ವಿಚಾರಿಸಿದ್ದರು..!!