ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಧಾರವಾಡ (ಕೊಪ್ಪಳ) : ಧಾರವಾಡ ಕೃಷಿ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳ ಕಲರವದ ಶಬ್ಧವೇ ಹೆಚ್ಚು ಕೇಳಿ ಬಂದಿತು..!
2022 ರ ಕೃಷಿ ಮೇಳದ ಧ್ಯೇಯ ವಾಕ್ಯದಂತೆ ರೈತರ ಆದಾಯ ದ್ವಿಗುಣಕ್ಕೆ ಉಪ ಕುಲಕಸಬುಗಳು (ಯಂತ್ರೋಪಕರಣಗಳ) ಪ್ರಾಮುಖ್ಯತೆ ಎಂಬಂತೆ ಇಡೀ ಸಮ್ಮೇಳನದಲ್ಲಿ ಒಕ್ಕಲುತನಕ್ಕೆ ಪ್ರಮುಖವಾಗಿ ಬೇಕಾಗಿರುವ ಯಂತ್ರೋಪಕರಣಗಳು ಮೇಳದಲ್ಲಿ ಅತಿ ಹೆಚ್ಚು ಪ್ರದರ್ಶನಗಳ ಜೊತೆಗೆ ಮಾರಾಟ ಹೆಚ್ಚಾಗಿ ಕಂಡು ಬಂದಿತು. ಇಂದಿನ ಆಧುನಿಕ ಯುಗದಲ್ಲಿ ಕೂಲಿಗಳು ಮತ್ತು ಪ್ರಕೃತಿ ವೈಪರೀತ್ಯದ ಹಿನ್ನೆಲೆಯಲ್ಲಿ ಕೃಷಿ ಮರೆಯಾಗುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಕೃಷಿ ಯಂತ್ರೋಪಕರಣಗಳು ಬಹಳಷ್ಟು ಪ್ರಾಮುಖ್ಯತೆವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಕೃಷಿ ಪರಿಕರಗಳಿಗೆ ಸಾಕಷ್ಟು ಪ್ರಾಮುಖ್ಯತೆ ಜೊತೆಗೆ ಬೇಡಿಕೆ ಕೂಡಾ ಬಂದಿದೆ. ಅದರ ಅಷ್ಟೆ, ಅವಶ್ಯಕತೆವಿದೆ ಎಂದು ಹೇಳಬಹುದಾಗಿದೆ. ಕೃಷಿಕರಿಗೆ ಮಹತ್ವವಾಗಿರುವ ಕೃಷಿಕರ ಯಂತ್ರೋಪಕರಣಗಳಿಗೆ ಈ ವರ್ಷದ ಕೃಷಿ ಮೇಳದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದಕ್ಕೆ ‘ಕೃಷಿ ಪ್ರಿಯ’ ಪತ್ರಿಕೆಯ ಪರವಾಗಿ ಅಭಿನಂದನೆಗಳು..!!