ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ರಸ್ತೆ ಮಧ್ಯ ಕ್ಯಾಂಟರ್ ವಾಹನ ನಿಲ್ಲಿಸಿದನ್ನು ಕಂಡು ವಿಚಾರಿಸಲು ಮುಂದಾದ ಪೊಲೀಸ್ ಸಿಬ್ಬಂದಿವೊಬ್ಬರ ಮೇಲೆ ಹಲ್ಲೆಗೆ ಮುಂದಾದ ಇಬ್ಬರು ಆರೋಪಿತರನ್ನು ಪೊಲೀಸರು ಬಂಧಿಸಿದ ಪ್ರಸಂಗ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಜರಗಿದೆ..!
ಕುಷ್ಟಗಿ ಪೊಲೀಸ್ ಠಾಣೆಯ ಹಲ್ಲೆಗೆ ಒಳಗಾದ ಪೇದೆ ಅಬ್ದುಲ್ ಖಾದರ, ಕುಷ್ಟಗಿ ಪಟ್ಟಣದಿಂದ ಶಾಖಾಪೂರ ಗ್ರಾಮಕ್ಕೆ ತೆರಳುವ ರಸ್ತೆ ಮಾರ್ಗದ ಭಾರತ್ ಗ್ಯಾಸ್ ಸರ್ವಿಸ್ ಸೆಂಟರ್ ಮುಂಭಾಗದ ಮುಖ್ಯ ರಾಜ್ಯ ಹೆದ್ದಾರಿಯಲ್ಲಿ ಶರಣಪ್ಪ ವೀರಭದ್ರಪ್ಪ ಸೊಬರದ್ ಹಾಗೂ ಶರಣಪ್ಪ ಚನ್ನಬಸಪ್ಪ ಹೊಸವಕ್ಕಲ ಎಂಬುವರು ತಮ್ಮ ಕ್ಯಾಂಟರ್ ವಾಹನವನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದರು. ಈ ಮಾರ್ಗದಲ್ಲಿ ದ್ವಿಚಕ್ರ ವಾಹನ ಮೂಲಕ ಕರ್ತವ್ಯಕ್ಕೆ ತೆರಳುತಿದ್ದ ಪೊಲೀಸ್ ಪೇದೆ, ಮುಂದಿನಿಂದ ಬರುವ ವಾಹನಗಳು ಕಾಣದೆ ಇರುವುದರಿಂದ ಹಾರನ್ ಹಾಕಿದ್ದಾನೆ. ಇಷ್ಟಕ್ಕೆ ಕುಪಿತಗೊಂಡ ಕ್ಯಾಂಟರ್ ವಾಹನದವರು ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಹಲ್ಲೆಗೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಜೀವ ಬೆದರಿಕೆ ಕೂಡಾ ಹಾಕಿದ್ದಾರೆ ಎಂದು ಪೇದೆ ಅಬ್ದುಲ್ ಖಾದರ ನೀಡಿದ ದೂರು ದಾಖಲಿಸಿಕೊಂಡ ಠಾಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿತರನ್ನು ಬಂಧಿಸುವ ಮೂಲಕ ಮುಂದಿನ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ..!!