ಮಳೆಗೆ ಕುಸಿದು ಬಿದ್ದಿರುವ ಪತ್ರಕರ್ತನ ಮನೆಗೆ ಭೇಟಿ ನೀಡಿದ ಬಯ್ಯಾಪೂರು

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಅತಿಯಾಗಿ ಸುರಿದ ಮಳೆಗೆ ಕುಸಿದು ಬಿದ್ದ ಪತ್ರಕರ್ತ ಸಂಗಮೇಶ ಮುಶಿಗೇರಿ ಅವರ ಮನೆಗೆ ಶಾಸಕ ಅಮರೇಗೌಡ ಪಾಟೀಲ ಭೇಟಿ ನೀಡಿ, ಸೂಕ್ತ ಪರಿಹಾರ ನೀಡುವಂತೆ ಸರಕಾರಕ್ಕೆ ಒತ್ತಾಯಿಸಿದರು..!

ರವಿವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕುಷ್ಟಗಿ ಪಟ್ಟಣದ 19 ವಾರ್ಡಿನಲ್ಲಿರುವ ‘ಕೃಷಿ ಪ್ರಿಯ’ ಪತ್ರಿಕೆ ವರದಿಗಾರ ಸಂಗಮೇಶ ಮುಶಿಗೇರಿ ಅವರ ಮನೆ ಕುಸಿದು ಬಿದ್ದಿದೆ. ಸುದ್ದಿ ತಿಳಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅವರು ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿದ ಪ್ರಸಂಗ ಜರುಗಿತು. ಅಲ್ಲದೆ, ಸ್ಥಳದಲ್ಲಿ ಕಂದಾಯ ಅಧಿಕಾರಿಗಳಿಗೆ ಸೂಕ್ತ ಪರಿಹಾರ ನೀಡುವುದಕ್ಕೆ ಶಾಸಕರು ಸೂಚನೆ ನೀಡಿದರು. ಸಿಮೆಂಟ್ ನಿಂದ ನಿರ್ಮಾಣವಾದ ಮನೆಗಳು ಇಂದು ಬಾಳಿಕೆ ಬರುತ್ತಿಲ್ಲವಾಗಿವೆ. ಸರಕಾರಿ ಕಟ್ಟಡಗಳು ನಿರ್ಮಾಣವಾದ ಕೆಲವೇ ವರ್ಷಗಳಲ್ಲಿ ಬಿರುಕು ಕಾಣಿಸುತ್ತವೆ. ಮಣ್ಣಿನಿಂದ ನಿರ್ಮಿಸಿದ ಮನೆಗಳ ಪಾಡು ಹೇಳತೀರದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಸರಕಾರ ನೀಡುವ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಅದರಲ್ಲಿ ಸರಕಾರ ಒಂದೇ ಹಂತದಲ್ಲಿಯೇ ಪರಿಹಾರ ಧನವನ್ನು ನೀಡುವುದಕ್ಕೆ ಕ್ರಮವಹಿಸಬೇಕೆಂದರು. ಕಂದಾಯ ನಿರೀಕ್ಷಕ ಉಮೇಶಗೌಡ, ಶರಣಪ್ಪ ದಾಸರ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಅನೀಲ ಆಲಮೇಲ, ಮಾಜಿ ಅಧ್ಯಕ್ಷ ಸಂಗಮೇಶ ಸಿಂಗಾಡಿ, ಹಿರಿಯ ವರದಿಗಾರ ಮುಖೇಶ್ ನಿಲೋಗಲ್,
ಪವಾಡಪ್ಪ ಚೌಡ್ಕಿ, ಬಸವರಾಜ ಪಲ್ಲೇದ, ಅನೀಲಕುಮಾರ ಕಮ್ಮಾರ, ರವೀಂದ್ರ ಬಾಕಳೆ, ಶ್ರೀಕಾಂತ್ ಸರಗಣಾಚಾರ, ಭೀಮಸೇನರಾವ್ ಕುಲಕರ್ಣಿ, ಭೀಮನಗೌಡ ಪಾಟೀಲ, ಸಂಗಮೇಶ ಲೂತಿಮಠ, ಮೈಲಾರಪ್ಪ ಮಂತ್ರಿ ಕಂದಾಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು, ಸೇರಿದಂತೆ ಸ್ಥಳೀಯ ಪತ್ರಕರ್ತ ಸಹೋದ್ಯೋಗಿಗಳು ಉಪಸ್ಥಿತರಿದ್ದರು. ‘ಕುಷ್ಟಗಿಯಲ್ಲಿ ವರುಣನ ಅರ್ಭಟಕ್ಕೆ ಪತ್ರಕರ್ತನ ಮನೆ ಕುಸಿತ’ ಎಂಬ ತಲೆಬರಹದ ಮೇಲೆ ಕೃಷಿ ಪ್ರಿಯ ಪತ್ರಿಕೆ ಸುದ್ದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ..!!