ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಚಿರತೆವೊಂದು ಸೆರೆಯಾಗಿದೆ..!
ರವಿವಾರ ರಾತ್ರಿ ಸುಮಾರಿಗೆ ಆಹಾರ ಹುಡುಕಿಕೊಂಡ ಬಂದ ಗಂಡು ಚಿರತೆಯು ಬೋನಿನೊಳಗೆ ಬಿದ್ದಿದೆ. ಕಳೆದ ಮೂರು ದಿನಗಳ ಹಿಂದೆ ಅರಣ್ಯ ಇಲಾಖೆ ಚಿರತೆ ಸೆರೆಗಾಗಿ ಬೋನನ್ನು ಅಳವಡಿಸಲಾಗಿತ್ತು. ಈ ಭಾಗದಲ್ಲಿನ ಕುರಿ, ಆಡು, ಆಕಳು ಮತ್ತು ನಾಯಿಗಳನ್ನು ಬಲಿ ಪಡೆದಿದ್ದ ಚಿರತೆ ಕಾಟದಿಂದ ರೈತರು ಬೇಸತ್ತು ಹೋಗಿದ್ದರು. ಕುಷ್ಟಗಿ ತಾಲೂಕಿನ ಹನುಮನಾಳ ಕಂದಾಯ ಹೋಬಳಿ ಪ್ರದೇಶ ಅಲ್ಲದೆ, ಗದಗ ಜಿಲ್ಲೆಯ ರೋಣ ತಾಲೂಕಿನ ಕಾಲಕಾಲೇಶ್ವರ, ಜೀಗೇರಿ, ಗುಡ್ಡದ ಮೇಲ್ಭಾಗದಲ್ಲಿರುವ ಬೈರಾಪುರ ಗ್ರಾಮಸ್ಥರು ಜೀವವನ್ನು ಕೈಯಲ್ಲಿ ಹಿಡಿದು ಜೀವಸಾಗಿಸುತ್ತಿದ್ದರು. ಚಿರತೆ ಸೆರೆಯಿಂದ ಈ ಭಾಗದವರು ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯ ಇಲಾಖೆಯ ಆರ್.ಎಫ್.ಓ ಚೈತ್ರಾ , ಅಧಿಕಾರಿಗಳಾದ ಲಾಲಸಾಬ್, ರಿಯಾಜ್, ಹನುಮಂತಪ್ಪ, ಕಳಕಪ್ಪ ಬ್ಯಾಳಿ, ಶಂಕರಗೌಡ ಅಕ್ಕೇರಿ ಸಿಬ್ಬಂದಿ ದೇವಪ್ಪ, ಶೇಖಪ್ಪ ಹಾಗೂ ಮಾಯಪ್ಪ ಅವರು ಚಿರತೆ ಸೆರೆಗಾಗಿ ಸಾಕಷ್ಟು ಶ್ರಮ ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು..!!