ಕುಷ್ಟಗಿಯಲ್ಲಿ ವರುಣನ ಆರ್ಭಟಕ್ಕೆ ಪತ್ರಕರ್ತನ ಮನೆ ಕುಸಿತ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರವಿವಾರ ಸುರಿದ ಭಾರಿ ಪ್ರಮಾಣದ ಮಳೆಗೆ ಸ್ಥಳೀಯ ಪುರಸಭೆ ವ್ಯಾಪ್ತಿಯ 19ನೇ ವಾರ್ಡಿನ ನಿವಾಸಿಯಾದ ಪತ್ರಕರ್ತ ಸಂಗಮೇಶ ಶಿವಪುತ್ರಪ್ಪ ಮುಶೀಗೇರಿ ಅವರಿಗೆ ಸೇರಿದ ಮಣ್ಣಿನ ಮನೆ ಕುಸಿದು ಬಿದ್ದಿದೆ..!

ಪತ್ರಕರ್ತ ಸಂಗಮೇಶ ಮುಶೀಗೇರಿ ಅವರು, ತಮ್ಮ ತಂದೆ ಶಿವಪುತ್ರಪ್ಪ ತಂದಿ ಗುರಲಿಂಗಪ್ಪ ಹಡಪದ ಅವರಿಗೆ ಸೇರಿದ ಈ ಮನೆಯಲ್ಲಿ ಪತ್ನಿ, ಮಗಳೊಂದಿಗೆ ವಾಸವಾಗಿದ್ದರು. ರಾತ್ರಿ ವೇಳೆ ಮಳೆ ಶುರುವಾದಾಗ ಮನೆಯ ಮುಂದಿನ ಕೊಣೆಯಲ್ಲಿ ಇವರು ಮಲಗಿಕೊಂಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮನೆಯ ಹಿಂಭಾಗದ ಮೂರು ಕೋಣೆಗಳ ಗೋಡೆ ಸಮೇತ ಚಾವಣಿಯು ಕುಸಿದು ಬಿದ್ದಿದೆ. ಮುಂದಿನ ಕೋಣೆಯ ಗೋಡೆಗಳು ಸಹ ಮಳೆ ನೀರಿಗೆ ಸಂಪೂರ್ಣ
ನೆನೆದಿದ್ದು, ಯಾವುದೇ ಸಮಯದಲ್ಲಿ ಕುಸಿಯುವ ಸಾಧ್ಯತೆ ಇದೆ. ಮನೆ ಕುಸಿದು ಅತಂತ್ರ ಸ್ಥಿತಿಯಲ್ಲಿರುವ ಪತ್ರಕರ್ತನ ಕುಟುಂಬದ ನೆರವಿಗೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹಾಗೂ ಸ್ಥಳೀಯ ಪುರಸಭೆ ಆಡಳಿತ ಕೂಡಲೇ ಮುಂದಾಗಬೇಕು ಕುಷ್ಟಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಮುಖರು ಒತ್ತಾಯಿಸಿದ್ದಾರೆ.