ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಗೋತಗಿ ಗ್ರಾಮದಲ್ಲಿ ದಲಿತರ ಮನೆವೊಂದು ಚರಂಡಿ ನೀರಿನಿಂದ ನಡುಗಡ್ಡೆಯಾಗಿದ್ದು ಜಿಪಂ ಸಿಇಓ ಅವರ ಖಡಕ್ ಎಚ್ಚರಿಕೆಯಿಂದ ಮನೆಯ ಆವರಣ ಹೊಲಸು ನೀರಿನಿಂದ ಮುಕ್ತವಾಗಿರುವುದು ವಿಶೇಷ..!
ಗ್ರಾಮದಲ್ಲಿ 15 -10-2022 ರಂದು ಜರುಗಿದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಪಂ ಸಿಇಓ ಬಿ.ಫೌಜಿಯಾ ತರುನ್ನಮ್ ಅವರು ಚರಂಡಿ ನೀರಿನಿಂದ ನಡುಗಡ್ಡೆಯಾಗಿದ್ದ ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಕೂಡಲೇ ನೀರು ವಿಲೇವಾರಿಗೆ ಪಂಚಾಯಿತಿ ಪಿಡಿಓ ಅವರಿಗೆ ಸೂಚನೆ ನೀಡಿದ್ದರು. ಅಲ್ಲದೆ, ಜಿಪಂ ಅಥವಾ ತಾಪಂ ಉಳಿತಾಯ ಹಣದಲ್ಲಿ ಚರಂಡಿ ಕಾಮಗಾರಿ ಕೈಗೊಳ್ಳುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದ್ದರು. ಅಲ್ಲದೆ, ‘ಕೃಷಿ ಪ್ರಿಯ’ ಪತ್ರಿಕೆ ಈ ಕುರಿತು ಸುದ್ದಿ ಪ್ರಸಾರ ಮಾಡಿದ್ದನ್ನು ಕೂಡಾ ಇಲ್ಲಿ ಸ್ಮರಿಸಬಹುದಾಗಿದೆ.
ಗ್ರಾಮಸ್ಥರಿಂದ ಅಭಿನಂದನೆ : ಸಿಇಓ ಮೇಡಂ ಅವರು ಭೇಟಿಯಿಂದ ಸರಕಾರಿ ಪ್ರಾಥಮಿಕ ಶಾಲೆಗೆ ಹತ್ತಿಕೊಂಡಿರುವ ಮನೆಯ ಆವರಣ ಸ್ವಚ್ಛವಾಗಿದೆ. ಕುಟುಂಬಸ್ಥರ ಪರವಾಗಿ ಇಡೀ ಗ್ರಾಮಸ್ಥರು ಸಿಇಓ ಬಿ.ಫೌಜಿಯಾ ತರುನ್ನಮ್ ಅವರನ್ನು ಅಭಿನಂದಿಸಿದ್ದಾರೆ..!!