ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
‘ಚರ್ಮ ಗಂಟು ರೋಗ’ದಿಂದ ಪಶುಗಳ ಆಕ್ರಂದನ ಮುಗಿಲು ಮುಟ್ಟಿದೆ. ರೋಗ ಮಾತ್ರ ಎಲ್ಲ ಕಡೆ ಈಗಾಗಲೇ ವಿಸ್ತಾರವಾಗಿದೆ. ರೋಗಕ್ಕೆ ನಿತ್ಯ ಜಾನುವಾರುಗಳು ಬಲಿಯಾಗುತ್ತಲೇ ಇವೆ. ನಿಯಂತ್ರಣ ಮಾತ್ರ ಕಷ್ಟ ಸಾಧ್ಯವಾಗಿದೆ. ರೋಗಕ್ಕೆ ಇಲ್ಲಿಯವರೆಗೂ ಚಿಕಿತ್ಸೆ ಇಲ್ಲದಂತಾಗಿದೆ. ಪಶು ಸಂಪತ್ತನ್ನು ನಂಬಿದ ಲಕ್ಷಾಂತರ ಕುಟುಂಬಗಳು ಆತಂಕದಲ್ಲಿವೆ. ‘ಚರ್ಮ ಗಂಟು’ ರೋಗ ನಿಯಂತ್ರಣಕ್ಕೆ ಮುಂದಾಗದ ಸರಕಾರಗಳು ಅರೆ ಕಾಸಿನ ಪರಿಹಾರ ಘೋಷಿಸಿ ಕೈ ಚೆಲ್ಲಿ ಕುಳಿತು ಬಿಟ್ಟಿವೆ. ಜಗತ್ತನ್ನು ತಲ್ಲಣಗೊಳಿಸಿದ ‘ಕೊರೋನಾ’ ನಿಯಂತ್ರಣಕ್ಕೆ ನೀಡಿದ ಪ್ರಾಶಸ್ತ್ಯ ಪಶು ರೋಗಕ್ಕೆ ಇಲ್ಲದಂತಾಗಿದೆ. ಇದೊಂದು ಸಾಂಕ್ರಾಮಿಕ ರೋಗದ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ಮಾಹಿತಿ ಅತ್ಯವಶ್ಯವಿದೆ. ಪಶು ಸಂಗೋಪನೆ ಇಲಾಖೆಯ ವಿವಿಧ ವೈಫಲ್ಯಗಳ ಕುರಿತು ‘ಕೃಷಿ ಪ್ರಿಯ’ ಪತ್ರಿಕೆ ಬೆಳಕು ಚೆಲ್ಲುವ ಸರಣಿ ಲೇಖನಗಳ ಸಣ್ಣ ಪ್ರಯತ್ನ ಪಶು ಪ್ರಿಯರಿಗಾಗಿ..!!