ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕೊಪ್ಪಳ ತಾಲೂಕಿನ ಇರಕಲ್ಲಗಡ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾವುಸಾಬ್ ಬಿರಾದಾರ ಅವರು ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತ್ತುಗೊಂಡಿದ್ದಾರೆ..!
ಇರಕಲ್ಲಗಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ತಾಪಂ ಇಓ ಅವರಿಗೆ ಅಭಿವೃದ್ಧಿ ಹಿತದೃಷ್ಟಿಯಿಂದ ಪಿಡಿಓ ವಿರುದ್ಧ ಸಾಕಷ್ಟು ದೂರುಗಳು ಕೊಪ್ಪಳ ತಾಪಂ ಇಓ ಸೇರಿದಂತೆ ಜಿಪಂ ಸಿಇಓ ಅವರಿಗೆ ಸಲ್ಲಿಕೆಯಾಗಿದ್ದವು. ತಾಪಂ ಇಓ ಅವರು ಜಿಪಂ ಸಿಇಓ ಅವರಿಗೆ ಸಲ್ಲಿಸಿದ 1-4 ಮಾಹಿತಿ ಆಧಾರದ ಮೇಲೆ ಅಮಾನತ್ತುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ..!!