ಹನುಮಸಾಗರದ ಬಾಲಕ ಮಹಾರಾಷ್ಟ್ರದಲ್ಲಿ ಪತ್ತೆ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದ ಬಾಲಕ ಮಹಾರಾಷ್ಟ್ರದ ನಾಗಪೂರ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ..!

ಸಿದ್ದಪ್ಪ ಭೀಮಪ್ಪ ಹಕ್ಕಿ (12) ಎಂಬ ಬಾಲಕ ಕಳೆದ ಶುಕ್ರವಾರ (14-10-2022) ರಂದು ಸಾಯಂಕಾಲ ಸಮಯದಲ್ಲಿ ನಾಪತ್ತೆಯಾಗಿದ್ದ, ಮಗನನ್ನು ಕಳೆದುಕೊಂಡ ಪಾಲಕರು ಕಂಗಾಲಾಗಿದ್ದರು. ಮಹಾರಾಷ್ಟ್ರ ರಾಜ್ಯದ ನಾಗಪುರದ ರೈಲ್ವೆ ಪೊಲೀಸರ ಸುಳಿವಿನಿಂದ ಬಾಲಕ ಪತ್ತೆಯಾಗಿದ್ದಾನೆ. ಬಾಲಕನಿಗೆ ಮಂಪರು ಬರುವ ಪೌಡರ್ ಬಳಸಿ ಯಾರೋ ಕರೆತಂದಿದ್ದರು ಎಂದು ಬಾಲಕ ತಿಳಿಸಿರುವುದು ಕೇಳಿ ಬಂದಿದೆ. ಈ ಕುರಿತು ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಬಾಲಕ ನಾಪತ್ತೆ ಕುರಿತು ಪ್ರಕರಣ ದಾಖಲಾಗಿತ್ತು. ಪೊಲೀಸರು ಸೇರಿದಂತೆ ಕುಟುಂಬಸ್ಥರು ಬಾಲಕನನ್ನು ಕರೆ ತರುವಲ್ಲಿ ಯಶಸ್ವಿಯಾದ ಕುರಿತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವುದು ವಿಶೇಷ..!!

– ನಾಪತ್ತೆಯಾದ ಬಾಲಕ ಸಿದ್ದಪ್ಪ ಮಹಾರಾಷ್ಟ್ರ ರಾಜ್ಯದ ನಾಗಪೂರ ಪಟ್ಟಣದಲ್ಲಿ ಪಾಲಕರ ಜೊತೆಯಲ್ಲಿರುವ ಚಿತ್ರ..!